ರಿಯಾ ದೂರಿನ ಆಧಾರದಲ್ಲಿ ಸುಶಾಂತ್ ಸಹೋದರಿ ವಿರುದ್ಧ ಎಫ್ಐಆರ್ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ನೀಡಿರುವ ದೂರಿನ ಆಧಾರದಲ್ಲಿ ಮುಂಬೈ ಪೊಲೀಸರು ಸುಶಾಂತ್ ಸಿಂಗ್ ರಜ್ಪೂತ್ ಅವರ ಸಹಹೋದರಿಯರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ನೀಡಿರುವ ದೂರಿನ ಆಧಾರದಲ್ಲಿ ಮುಂಬೈ ಪೊಲೀಸರು ಸುಶಾಂತ್ ಸಿಂಗ್ ರಜ್ಪೂತ್ ಅವರ ಸಹಹೋದರಿಯರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸುಶಾಂತ್ ಗೆ ಸಹೋದರಿಯರಾದ ಪ್ರಿಯಾಂಕ ಸಿಂಗ್ ಹಾಗೂ ಮೀತು ಸಿಂಗ್ ಇಬ್ಬರೂ ದೆಹಲಿ ಮೂಲದ ವೈದ್ಯ ತರುಣ್ ಕುಮಾರ್ ನ ಸಹಾಯದಿಂದ ವೈದ್ಯರು ಅಧಿಕೃತವಾಗಿ ಸೂಚಿಸದೇ ಇದ್ದರೂ ಔಷಧಗಳನ್ನು ನೀಡುತ್ತಿದ್ದರು ಎಂದು ರಿಯಾ ಚಕ್ರವರ್ತಿ ಆರೋಪಿಸಿದ್ದಾರೆ. ಐಪಿಸಿ ಸೆಕ್ಷನ್ ಹಾಗೂ ನಾರ್ಕೊಟಿಕ್ ಡ್ರಗ್ಸ್ ಹಾಗೂ ಸೈಕೋಟ್ರೊಫಿಕ್ ಸಬ್ಸ್ಟೆನ್ಸ್ ಕಾಯ್ದೆಯಡಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಆರೋಪದಡಿ ಪ್ರಿಯಾಂಕ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದೂ ಆರೋಪಿಸಿದ್ದಾರೆ. ಆತಂಕ, ಅಶಾಂತಿಗೆ ಚಿಕಿತ್ಸೆಗೆ ವೈದ್ಯರು ನೀಡುವ ಔಷಧ ಚೀಟಿಯ ನಕಲನ್ನು ತಯಾರಿಸಿದ್ದರು ಎಂದು ಆರೋಪಿಸಲಾಗಿದೆ.