ಕುಸ್ತಿಗೂ ಸೈ, ಅನುಷ್ಕಾ ಶರ್ಮಾ ಟ್ರ್ಯಾಕ್ಟರ್ ಓಡಿಸೋಕು ಜೈ ಸುಲ್ತಾನ್ ಚಿತ್ರದಲ್ಲಿ ಕುಸ್ತಿಮಾಡಿ ಸೈ ಎನಿಸಿಕೊಂಡಿದ್ದ ನಟಿ ಅನುಷ್ಕಾ ಶರ್ಮಾ ಪಂಜಾಬ್ ನ ಗದ್ದೆಯೊಂದರಲ್ಲಿ ಟ್ರ್ಯಾಕ್ಟರ್ ಡ್ರೈವ್ ಮಾಡಿ ಎಲ್ಲರ ಹುಬ್ಬೇರುವಂತೆ ... ನವದೆಹಲಿ: ಸುಲ್ತಾನ್ ಚಿತ್ರದಲ್ಲಿ ಕುಸ್ತಿಮಾಡಿ ಸೈ ಎನಿಸಿಕೊಂಡಿದ್ದ ನಟಿ ಅನುಷ್ಕಾ ಶರ್ಮಾ ಪಂಜಾಬ್ ನ ಗದ್ದೆಯೊಂದರಲ್ಲಿ ಟ್ರ್ಯಾಕ್ಟರ್ ಡ್ರೈವ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅದಲ್ಲದೇ ಪಂಜಾಬ್ ಗದ್ದೆಯಲ್ಲಿ ಸುಲ್ತಾನ್ ಜೊತಗಿದ್ದ ಅನುಷ್ಕಾ ಟಮೋಟೋ ಹಣ್ಣನ್ನು ತಿಂದಿದ್ದರು. ಆದರೆ ಟ್ರ್ಯಾಕ್ಟರ್ ರೈಡ್ ಮಾಡುವ ಪಾತ್ರಕ್ಕೆ ಅವರನ್ನು ಕೇಳಿದ್ದಾಗ ಅನುಷ್ಕಾ ಹೇಳಿದ್ರಂತೆ ಯೆಸ್ ಎಂದು ಹೇಳಿದ್ರಂತೆ.ಸುಲ್ತಾನ್ ಅಧಿಕೃತ ಟ್ವಿಟರ್ ಅಕೌಂಟ್ ನಲ್ಲಿ ಅನುಶ್ಕಾ ಶರ್ಮಾ ಟ್ರ್ಯಾಕ್ಟರ್ ಓಡಿಸುತ್ತಿರುವ ಫೋಟೋವನ್ನು ಅಪ್ ಲೋಡ್ ಮಾಡಲಾಗಿದೆ. ಸಲ್ಮಾನ್ ಖಾನ್ ಜೊತೆ ಸುಲ್ತಾನ್ ಚಿತ್ರದಲ್ಲಿ ನಟಿಸುತ್ತಿರುವ ಅನುಷ್ಕಾ ಶರ್ಮಾ, ಚಿತ್ರಕ್ಕಾಗಿ ಕುಸ್ತಿಯನ್ನು ಕಲಿತಿದ್ದಾರಂತೆ. ಕುಸ್ತಿಪಟುವೊಬ್ಬರ ಜೀವನ ಕಥೆಯನ್ನು ಆಧರಿಸಿ ತಯಾರಾಗುತ್ತಿರುವ ಸುಲ್ತಾನ್ ಚಿತ್ರ ಈ ವರ್ಷದ ಈದ್ ಸಮಯದಲ್ಲಿ ಬಿಡುಗಡೆಯಾಗಲಿದೆ.