ಮೂವಿ ಮಾಫಿಯಾದ ಬಗ್ಗೆ ಮತ್ತೊಂದು ಗಂಭೀರ ಆರೋಪ ಮಾಡಿದ ಕಂಗನಾ! ಬಾಲಿವುಡ್ ನಟಿ ಕಂಗನಾ ರಣಾವತ್ ಮೂವಿ ಮಾಫಿಯಾದ ಬಗ್ಗೆ ಮತ್ತೊಂದು ಗಂಭೀರ ಆರೋಪ ಮಾಡಿದ್ದು ತಮ್ಮ ಟ್ವಿಟರ್ ಖಾತೆ ಯಾವುದೇ ನಿಮಿಷದಲ್ಲಿ ಬೇಕಾದರೂ ಈ ಮಾಫಿಯಾದಿಂದ ಅಮಾನತ್ತಾಗಬಹುದು ಎಂದು ಹೇಳಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಮೂವಿ ಮಾಫಿಯಾದ ಬಗ್ಗೆ ಮತ್ತೊಂದು ಗಂಭೀರ ಆರೋಪ ಮಾಡಿದ್ದು ತಮ್ಮ ಟ್ವಿಟರ್ ಖಾತೆ ಯಾವುದೇ ನಿಮಿಷದಲ್ಲಿ ಬೇಕಾದರೂ ಈ ಮಾಫಿಯಾದಿಂದ ಅಮಾನತ್ತಾಗಬಹುದು ಎಂದು ಹೇಳಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಸಾಮಾಜಿ ಜಾಲತಾಣಗಳಲ್ಲಿ ನಿರ್ಭೀತಿಯಿಂದ ಹಂಚಿಕೊಳ್ಳುವುದಕ್ಕಾಗಿಯೇ ಖ್ಯಾತಿ ಪಡೆದಿರುವ ಕಂಗನಾ ರಣಾವತ್, ತಮ್ಮ ಮಾತುಗಳು ಒಂದೇ ಆಯಾಮವುಳ್ಳದ್ದು ಎಂದುಕೊಳ್ಳುವ ಮೂವಿ ಮಾಫಿಯಾದಿಂದ ತಮ್ಮ ಟ್ವಿಟರ್ ಖಾತೆ ಯಾವುದೇ ಕ್ಷಣದಲ್ಲಿ ಬೇಕಾದರೂ ಅಮಾನತುಗೊಳ್ಳಬಹುದು, ಈ ಬಾರಿ ಅಂತಹವರ ಮುಖವಾಡ ಕಳಚಲು ಇದು ಬಳಕೆಯಾಗಲಿದೆ ಎಂದೂ ಕಂಗಾನ ಮಾರ್ಮಿಕವಾಗಿ ನುಡಿದಿದ್ದಾರೆ. , , . , , themನನ್ನ ಮಾತುಗಳನ್ನು ಇಲ್ಲಿರುವ ನನ್ನ ಮಿತ್ರರು, ಬಹುತೇಕ ಮಂದಿ ಮೂವಿ ಮಾಫಿಯಾದವರು, ಅವರ ರಾಷ್ಟ್ರವಿರೋಧಿ, ಹಿಂದೂಫೋಬಿಕ್ ಗುಂಪಿಗೆ ಒಂದೇ ಆಯಾಮವುಳ್ಳದ್ದು ಎನಿಸಬಹುದು. ನನಗೆ ಹೇಳುವುದಕ್ಕೆ ಸಾಕಷ್ಟು ಇದೆ. ಆದರೆ ಈ ಗುಂಪಿನಿಂದ ನನ್ನ ಟ್ವಿಟರ್ ಖಾತೆ ಯಾವಗ ಬೇಕಾದರೂ ನಿಷ್ಕ್ರಿಯವಾಗಬಹುದು, ಆದರೆ ಈ ಬಾರಿ ಅಂತಹ ಘಟನೆ ನಡೆದರೆ ಅವರ ಮುಖವಾಡ ಕಳಚಲು ನಾನು ಈ ಸನ್ನಿವೇಶವನ್ನು ಬಳಕೆ ಮಾಡಿಕೊಳ್ಳುತ್ತೇನೆ ಎಂದು ಕಂಗನಾ ಟ್ವಿಟರ್ ಮೂಲಕವೇ ಎಚ್ಚರಿಕೆ ನೀಡಿದ್ದಾರೆ.