'ಸೂರ್ಯವಂಶ' ಬೆಡಗಿಯ 14 ವರ್ಷದ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಖಚಿತಪಡಿಸಿದ 'ಇಶಾ' ಪತಿ ಟಿಮ್ಮಿ ನಾರಂಗ್! 2009 ರಲ್ಲಿ ನಟಿ ಇಶಾ ಕೊಪ್ಪಿಕರ್ ಉದ್ಯಮಿ ಟಿಮ್ಮಿ ನಾರಂಗ್ ಅವರೊಂದಿಗೆ ವಿವಾಹವಾಗಿದ್ದರು. ಕೆಳ ದಿನಗಳಿಂದಲೂ ಇಬ್ಬರು ವಿಚ್ಛೇದನ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ವಿಷಯಕ್ಕೆ ಸಂಬಂಧಿಸಿದಂತೆ ಇಶಾ ಕೊಪ್ಪಿಕರ್ ಪತಿ ಟಿಮ್ಮಿ ನಾರಂಗ್ ಸ್ಪಷ್ಟನೆ ನೀಡಿದ್ದಾರೆ. ಕನ್ನಡದ ಸೂರ್ಯವಂಶ, ಓ ನನ್ನ ನಲ್ಲೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಇಶಾ ಕೊಪ್ಪಿಕರ್ ಅವರ 14 ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ.2009 ರಲ್ಲಿ ನಟಿ ಇಶಾ ಕೊಪ್ಪಿಕರ್ ಉದ್ಯಮಿ ಟಿಮ್ಮಿ ನಾರಂಗ್ ಅವರೊಂದಿಗೆ ವಿವಾಹವಾಗಿದ್ದರು. ಕೆಳ ದಿನಗಳಿಂದಲೂ ಇಬ್ಬರು ವಿಚ್ಛೇದನ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ವಿಷಯಕ್ಕೆ ಸಂಬಂಧಿಸಿದಂತೆ ಇಶಾ ಕೊಪ್ಪಿಕರ್ ಪತಿ ಟಿಮ್ಮಿ ನಾರಂಗ್ ಸ್ಪಷ್ಟನೆ ನೀಡಿದ್ದಾರೆ.ಸುಮಾರು ಒಂದೂವರೆ ವರ್ಷಗಳ ನಂತರ ನಾವು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದೆವು. ಕಳೆದ ವರ್ಷ ನವೆಂಬರ್‌ನಲ್ಲಿ ವಿಚ್ಛೇದನ ನೀಡಲಾಯಿತು, ಪರಸ್ಪರ ಸೌಹಾರ್ದಯುತ ಷರತ್ತುಗಳ ಮೇಲೆ ಡಿವೋರ್ಸ್ ಆಗಿದೆ. ನಾವಿಬ್ಬರೂ ಈಗ ನಮ್ಮ ಜೀವನವನ್ನು ಮುಂದುವರಿಸಲು ಸ್ವತಂತ್ರರಾಗಿದ್ದೇವೆ. ಅದರ ಬಗ್ಗೆ ಯಾವುದೇ ಗೊಂದಲ ಏಕೆ ಎಂದು ನನಗೆ ಕಾಣುತ್ತಿಲ್ಲ. ಇಶಾ ತಮ್ಮ ಮಗಳು ರಿಯಾನ್ನಾಳೊಂದಿಗೆ ತನ್ನ ಮನೆಯಿಂದ ಹೊರಬಂದಿದ್ದಾರೆ ಎಂದು ಟಿಮ್ಮಿ ತಿಳಿಸಿದ್ದಾರೆ.ಈ ಕುರಿತಂತೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಗಂಡನ ಮನೆಯಿಂದ ಬಂದು ತುಂಬಾ ದಿನಗಳೇ ಆಗಿವೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಅದು ಈಗ ನಿಜವಾಗಿದೆ. ಇಶಾ ಮತ್ತು ಟಿಮ್ಮಿ ನವೆಂಬರ್ 2009 ರಲ್ಲಿ ವಿವಾಹವಾದರು. ಜಿಮ್‌ನಲ್ಲಿ ಭೇಟಿಯಾದ ನಂತರ ಇಬ್ಬರೂ ಪ್ರೀತಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ.