ಎನ್ ಸಿಬಿ ಎದುರು ಸತ್ಯ ಒಪ್ಪಿಕೊಂಡ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಮಹತ್ವದ ಬೆಳವಣಿಗೆಯೊಂದರಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಎನ್ ಸಿಬಿ ( ನ್ಯಾಷನಲ್ ಕ್ರೈಮ್ ಬ್ಯೂರೋ) ಎದುರು ಸತ್ಯ ಒಪ್ಪಿಕೊಂಡಿದ್ದಾರೆ. ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಎನ್ ಸಿಬಿ ( ನ್ಯಾಷನಲ್ ಕ್ರೈಮ್ ಬ್ಯೂರೋ) ಎದುರು ಸತ್ಯ ಒಪ್ಪಿಕೊಂಡಿದ್ದಾರೆ. ಎನ್ ಸಿಬಿ ವಿಚಾರಣೆ ಸಂದರ್ಭದಲ್ಲಿ ಸತ್ಯ ಒಪ್ಪಿಕೊಂಡಿರುವ ರಿಯಾ ಚಕ್ರವರ್ತಿ, ತಾವು ಸುಶಾಂತ್ ಸಿಂಗ್ ರಜ್ಪೂತ್ ಜೊತೆ ಗಾಂಜಾ ತುಂಬಿಸಿದ್ದ ಸಿಗರೇಟ್ ನ್ನು ಸೇದುತ್ತಿದ್ದೆ ಎಂದು ಹೇಳಿದ್ದಾರೆ. 2016 ರಿಂದ ಸುಶಾಂತ್ ಸಹ ಡ್ರಗ್ಸ್ ಸೇವಿಸುತ್ತಿದ್ದರು ಎಂಬ ಅಘಾತಕಾರಿ ಅಂಶವನ್ನೂ ರಿಯಾ ಎನ್ ಸಿಬಿ ಎದುರು ಬಹಿರಂಗಪಡಿಸಿದ್ದಾರೆ. ರಿಯಾ ಚಕ್ರವರ್ತಿ ಮನೆಯಿಂದ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ಸ್ ನ್ನು ವಶಪಡಿಸಿಕೊಳ್ಳಲಾಗಿದೆ. ಸುಶಾಂತ್ ಸಾವಿನ ಜತೆ ಡ್ರಗ್ಸ್ ನಂಟು ಥಳುಕು ಹಾಕಿಕೊಂಡಿದ್ದು ಎನ್ಸಿಬಿ ತನಿಖೆ ನಡೆಸುತ್ತಿದೆ. ಪರಿಣಾಮ ಈಗಾಗಲೇ ಹಲವು ಡ್ರಗ್ ಪೆಡ್ಲರ್ಗಳ ಹೆಸರು ಹೊರಬಿದ್ದಿದೆ. ಆದರೆ ಡ್ರಗ್ಸ್ ಗೆ ಸಂಬಂಧಿಸಿದಂತೆ ಇದುವರೆಗೂ ಸತ್ಯ ಒಪ್ಪದಿದ್ದ ರಿಯಾ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾರೆ.