ಆತ್ಮಹತ್ಯೆಗೂ ಮುನ್ನ ಮೂರು ವಿಷಯಗಳ ಬಗ್ಗೆ ಗೂಗಲ್ ಸರ್ಚ್ ಮಾಡಿದ್ದ ನಟ ಸುಶಾಂತ್ ಸಿಂಗ್! ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್ ಸಿಂಗ್ ರಜಪೂತ್‌ ಸಾವಿಗೂ ಮೊದಲು ಮೂರು ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕಿದ್ದಾರೆ ಎಂದು ಮುಂಬೈ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಮುಂಬಯಿ: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್ ಸಿಂಗ್ ರಜಪೂತ್‌ ಸಾವಿಗೂ ಮೊದಲು ಮೂರು ವಿಷಯಗಳನ್ನು ಗೂಗಲ್‌ನಲ್ಲಿ ಹುಡುಕಿದ್ದಾರೆ ಎಂದು ಮುಂಬೈ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕಾರ ಅವರು ಕೆಲವು ಸಾಮಾನ್ಯ ಸುದ್ದಿಗಳನ್ನು ಹುಡುಕಿದ್ದಾರೆ, ತಮ್ಮ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಹೆಸರು ಹುಡುಕಿದ್ದಾರೆ ಅಷ್ಟೇ ಅಲ್ಲದೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಲೇಖನಗಳನ್ನು ಹುಡುಕಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಕೆಲ ಗಂಟೆಗಳ ಮೊದಲು ತನ್ನ ಹೆಸರನ್ನೂ ಗೂಗಲ್‌ನಲ್ಲಿ ಹುಡುಕಿದ್ದಾರೆ ಎನ್ನಲಾಗುತ್ತಿದೆ. ಸುಶಾಂತ್ ಅವರ ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ನ ವಿಧಿವಿಜ್ಞಾನ ತನಿಖೆಯಿಂದ ಈ ಮಾಹಿತಿ ತಿಳಿದುಬಂದಿದೆ. ಅವರ ಬ್ಯಾಂಕ್ ಖಾತೆಯ ಪರಿಶೀಲನೆಯ ಪ್ರಕಾರ 2.8 ಕೋಟಿ ಹಣವನ್ನು ಜಿಎಸ್‌ಟಿ ಮೂಲಕ ವರ್ಗಾವಣೆ ಮಾಡಲಾಗಿತ್ತು. ಸಿನಿಮಾ ಕ್ಷೇತ್ರದ 40 ಮಂದಿಯ ಹೇಳಿಕೆಗಳನ್ನು ಈ ಪ್ರಕರಣದಲ್ಲಿ ದಾಖಲಿಸಲಾಗಿದೆ.ಮಾಜಿ ಮ್ಯಾನೇಜರ್ ದಿಶಾ ಸಾವಿನೊಂದಿಗೆ ಸುಶಾಂತ್ ಹೆಸರನ್ನು ತಳಕು ಹಾಕಲಾಗಿತ್ತು. ಆ ಕಾರಣಕ್ಕೆ ಸುಶಾಂತ್ ಮನನೊಂದಿದ್ದರು ಎನ್ನಲಾಗಿದೆ.