ಪ್ಯಾಚ್ ಅಪ್ ನತ್ತ ನಟ ಹೃತಿಕ್ ರೋಷನ್ -ಸೂಸಾನೆ ದಾಂಪತ್ಯ? ಹಲವು ದಿನಗಳಿಂದ ದೂರವಾಗಿದ್ದ ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಆತನ ಮಾಜಿ ಪತ್ನಿ ಸೂಸಾನೆ ಮತ್ತೆ ಒಂದಾಗಿದ್ದಾರೆ... ನವದೆಹಲಿ: ಹಲವು ದಿನಗಳಿಂದ ದೂರವಾಗಿದ್ದ ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಆತನ ಮಾಜಿ ಪತ್ನಿ ಸೂಸಾನೆ ಖಾನ್ ಮತ್ತೆ ಒಂದಾಗಿದ್ದಾರೆ. ಹಲವು ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಹೃತಿಕ್ ಮತ್ತು ಸೂಸಾನೆ ಇಬ್ಬರು ತಮ್ಮ ಪೋಷಕತ್ವದ ಜವಾಬ್ದಾರಿ ಮರೆತಿಲ್ಲ. ಇಬ್ಬರು ಇತ್ತೀಚೆಗೆ ತಮ್ಮ ಮಕ್ಕಳಾದ ಹೆರ್ ಹಾನ್ ಮತ್ತು ಹೃದಾನ್ ಜೊತೆ ರೆಸ್ಟೋರೆಂಟ್ ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಹೃತಿಕ್ ಬಿಳಿ ಬಣ್ಣದ ಶರ್ಟ್ ಮೇಲೆ ಗ್ರೀನ್ ಜಾಕೆಟ್ ತೊಟ್ಟಿದ್ದರು, ಇನ್ನೂ ಸೂಸಾನೆ ರೆಡ್ ಜೀನ್ಸ್ ಮತ್ತು ಬ್ಲಾಕ್ ಟಾಪ್ ಧರಿಸಿದ್ದರು. ಇಡೀ ಕುಟುಂಬ ಒಂದಾಗಿ ಒಂದೇ ಕಾರಿನಲ್ಲಿ ವಾಪಸ್ ತೆರಳಿದ್ದಾರೆ. ಇನ್ನು ಹೃತಿಕ್ ಅಭಿನಯದ ಕಾಬಿಲ್ ಚಿತ್ರ ಮುಂದಿನ ವರ್ಷ ತೆರೆ ಕಾಣಲು ಸಿದ್ಧವಾಗಿದೆ.