ಒಂದೇ ವಾರದಲ್ಲಿ ವಿಶ್ವದಾದ್ಯಂತ ರೂ. 634 ಕೋಟಿ ದೋಚಿದ 'ಪಠಾಣ್' ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಹೊಸ ಹೊಸ ದಾಖಲೆ ಬರೆಯುತ್ತಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಹೊಸ ಹೊಸ ದಾಖಲೆ ಬರೆಯುತ್ತಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಬಿಡುಗಡೆಯಾಗಿ ಏಳು ದಿನ ಕಳೆದರೂ ಗಳಿಕೆ ವಿಚಾರದಲ್ಲಿ ಕೊಂಚವೂ ಕಡಿಮೆಯಾಗಿಲ್ಲ. ಜನವರಿ 25 ರಂದು ಬಿಡುಗಡೆಯಾದ ಈ ಚಿತ್ರ ಇಲ್ಲಿಯವರೆಗೂ ವಿಶ್ವದಾದ್ಯಂತ ರೂ. 634 ಕೋಟಿ ದೋಚಿದೆ.ಚಿತ್ರ ರಿಲೀಸ್ ಆಗಿ ಏಳನೇ ದಿನವಾದ ಇಂದು ಹಿಂದಿನಲ್ಲಿ ರೂ. 22 ಕೋಟಿ, ಡಬ್ಬಿಂಗ್ ಆವೃತ್ತಿಯಲ್ಲಿ ರೂ. 1 ಕೋಟಿ ಸೇರಿದಂತೆ ಒಟ್ಟಾರೇ 23 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ದೇಶದಲ್ಲಿ ಒಟ್ಟಾರೇ ರೂ. 28 ಕೋಟಿ ಕೊಳ್ಳೆ ಹೊಡೆದಿದೆ.ಇದನ್ನೂ ಓದಿ: ಶಾರುಖ್ ಖಾನ್ ನಟ ಅಲ್ಲ, ಅವರೊಂದು ಭಾವನೆ, ದೇಶದ ನಂಬರ್ 1 ಆಕ್ಷನ್ ಹೀರೋ': ಜಾನ್ ಅಬ್ರಹಾಂಇನ್ನೂ ವಿದೇಶಗಳಲ್ಲಿ ರೂ. 15 ಕೋಟಿ ರೂ. ಗಳಿಸಿದೆ. ಪಠಾಣ್ ಏಳು ದಿನಗಳಲ್ಲಿ ವಿದೇಶಗಳಲ್ಲಿ ದಾಖಲೆಯ ರೂ. 238. 5 ಕೋಟಿ ಕಲೆಕ್ಷನ್ ಮಾಡಿದೆ. 'ಪಠಾಣ್' ಒಟ್ಟಾರೇ ಇಲ್ಲಿಯವರೆಗೂ ಭಾರತದಲ್ಲಿ (ಹಿಂದಿ ಭಾಷೆಯಲ್ಲಿ ರೂ. 318.50 ಕೋಟಿ, ಡಬ್ಬಿಂಗ್ ವರ್ಸನ್ ನಲ್ಲಿ ರೂ. 11.75 ಕೋಟಿ) 330. 25 ಕೋಟಿ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. ‘’: ₹ 634 7 … # [# + #] … 7 … #: ₹ 395 [₹ 330.25 ] #: ₹ 239 : ₹ 634 ../