'ಬುಧಿಯಾ ಸಿಂಗ್-ಬಾರ್ನ್ ಟು ರನ್' ಆಗಸ್ಟ್ ನಲ್ಲಿ ಬಿಡುಗಡೆ ಮನೋಜ್ ಬಾಜಪೇಯಿ ನಟಿಸಿರುವ 'ಬುಧಿಯ ಸಿಂಗ್-ಬಾರ್ನ್ ಟು ರನ್' ಚಿತ್ರ ಆಗಸ್ಟ್ ೫ಕ್ಕೆ ಬಿಡುಗಡೆಯಾಗಲಿದೆ. ಮುಂಬೈ: ಮನೋಜ್ ಬಾಜಪೇಯಿ ನಟಿಸಿರುವ 'ಬುಧಿಯ ಸಿಂಗ್-ಬಾರ್ನ್ ಟು ರನ್' ಚಿತ್ರ ಆಗಸ್ಟ್ ೫ಕ್ಕೆ ಬಿಡುಗಡೆಯಾಗಲಿದೆ. ಸೌಮೇಂದ್ರ ಪಧಿ ನಿರ್ದೇಶನದ 'ಬುಧಿಯ ಸಿಂಗ್-ಬಾರ್ನ್ ಟು ರನ್', ೪೮ ಮ್ಯಾರಾಥಾನ್ ಓಟಗಳಲ್ಲಿ ಭಾಗವಹಿಸಿರುವ ಬುಧಿಯ ಸಿಂಗ್ ಅವರ ಬಯೋಪಿಕ್. ಅವರು ಐದು ವರ್ಷದ ಬಾಲಕನಾಗಿದ್ದಾಗ ಭುವನೇಶ್ವರದಿಂದ ಪುರಿಯವರೆಗೆ ಮ್ಯಾರಥಾನ್ ಓದಿದ್ದರು ಎಂದು ಹೇಳಿಕೆ ತಿಳಿಸಿದೆ. ವೈಕಾಂ೧೮ ಮತ್ತು ಕೋಡ್ ರೆಡ್ ಫಿಲ್ಮ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಸಿನೆಮಾದಲ್ಲಿ ತಿಲೋತ್ತಮ ಶೋಮ್ ಮತ್ತು ಮಾಸ್ಟರ್ ಮಯೂರ್ ನಟಿಸಿದ್ದಾರೆ.