ನನ್ನ ಸಿನೆಮಾ ಜೊತೆ ಕಾನ್ ಗೆ ಹೋಗಲಿಷ್ಟ: ದೀಪಿಕಾ ಪಡುಕೋಣೆ ಬ್ರಾಂಡ್ ಒಂದರ ಪ್ರಚಾರಕ್ಕಾಗಿ ಕಾನ್ ಸಿನೆಮೋತ್ಸವದ ಕೆಂಪು ಹಾಸಿನ ಮೇಲೆ ಈ ಹಿಂದೆ ನಡೆದಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತೆ ಕಾನ್ ಗೆ ತನ್ನ ಮುಂಬೈ: ಬ್ರಾಂಡ್ ಒಂದರ ಪ್ರಚಾರಕ್ಕಾಗಿ ಕಾನ್ ಸಿನೆಮೋತ್ಸವದ ಕೆಂಪು ಹಾಸಿನ ಮೇಲೆ ಈ ಹಿಂದೆ ನಡೆದಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತೆ ಕಾನ್ ಗೆ ತನ್ನ ಸಿನೆಮಾದೊಂದಿಗೆ ಹೋಗುವಾಸೆ ಎಂದಿದ್ದಾರೆ. "ನನಗೆ ಅಲ್ಲಿ ಹೋಗಲು ಯಾವುದೇ ಕಾರಣ ಇಲ್ಲ ಆದರೂ ಅಲ್ಲಿರಲು ಆಸೆ. ಕೆಲವು ವರ್ಷಗಳ ಹಿಂದೆ ನಾನು ಸಿನೆಮಾ ವೃತ್ತಿಜೀವನ ಆರಂಭಿಸಿದಾಗ ಅಲ್ಲಿಗೆ ಹೋಗಿದ್ದೆ. ಆದರೆ ಅದು ಬ್ರಾಂಡ್ ಪ್ರಚಾರಕ್ಕಾಗಿ" ಎಂದು ಪ್ರಶ್ನೆಯೊಂದಕ್ಕೆ ದೀಪಿಕಾ ಉತ್ತರಿಸಿದ್ದಾರೆ. "ಮತ್ತೆ ಬ್ರಾಂಡ್ ಪ್ರಚಾರಕ್ಕಾದರೆ ನನಗೆ ಗೊತ್ತಿಲ್ಲ ಆದರೆ ನನ್ನ ಸಿನೆಮಾ ಜೊತೆಗಂತೂ ಅಲ್ಲಿಗೆ ಹೋಗುವಾಸೆ" ಎಂದು ಅವರು ತಿಳಿಸಿದ್ದಾರೆ. 'ಒಂ ಶಾಂತಿ ಓಂ' ನಟಿ ೨೦೧೦ ರ ಕಾನ್ ಸಿನೆಮೋತ್ಸವದಲ್ಲಿ ಮದ್ಯದ ಬ್ರಾಂಡ್ ಒಂದರ ಪ್ರಚಾರಕ್ಕೆ ಸೀರೆಯುಟ್ಟು ಕೆಂಪು ಹಾಸಿನ ಮೇಲೆ ನಡೆದಿದ್ದರು. ಈ ವರ್ಷ ಲಾರಿಯಲ್ ಪ್ಯಾರಿಸ್ ಬ್ರಾಂಡ್ ಗೆ ರಾಯಭಾರಿಯಾಗಿ ಕತ್ರಿನಾ ಕೈಫ್ ಕಾನ್ ಸಿನೆಮೋತ್ಸವದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಅಂತರಾಷ್ಟ್ರೀಯ ಸೌಂದರ್ಯವರ್ಧಕವೊಂದರ ಪ್ರಚಾರಕ್ಕಾಗಿ ಸೋನಮ್ ಕಪೂರ್ ಮತ್ತು ಐಶ್ವರ್ಯ ರೈ ತೆರಳಿದ್ದಾರೆ. ಮೇ ೧೩ ರಂದು ಪ್ರಾರಂಭವಾದ ೨೦೧೫ರ ಕಾನ್ ಚಲನಚಿತ್ರೋತ್ಸವ ಮೇ ೨೪ ಕ್ಕೆ ಮುಕ್ತಾಯವಾಗಲಿದೆ.