ಲೈಂಗಿಕ ಕಿರುಕುಳ ಆರೋಪ: ನಿರ್ಮಾಪಕ ಸಂಜಯ್ ಕೊಹ್ಲಿ ವಿರುದ್ಧ ನಟಿ ಶಿಲ್ಪಾ ಶಿಂದೆ ಎಫ್ ಐಆರ್! ಖ್ಯಾತ ಕಿರುತೆರೆ ಧಾರಾವಾಹಿ ಭಾಭಿ ಜೀ ಘರ್ ಪರ್ ಹೇ ಮೂಲಕ ಮನೆ ಮಾತಾಗಿದ್ದ ನಟಿ ಶಿಲ್ಪಾ ಶಿಂದೆ ಆ ಧಾರಾವಾಹಿಯಿಂದ ಹೊರಬಂದ ವಿಚಾರ ಹಳೆಯದೇ ಆದರೂ ಇದೀಗ ನಟಿ ಧಾರಾವಾಹಿಯ ನಿರ್ಮಾಪಕರ ವಿರುದ್ಧ ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪ ಮಾಡಿದ್ದಾರೆ. ಮುಂಬೈ: ಖ್ಯಾತ ಕಿರುತೆರೆ ಧಾರಾವಾಹಿ ಭಾಭಿ ಜೀ ಘರ್ ಪರ್ ಹೇ ಮೂಲಕ ಮನೆ ಮಾತಾಗಿದ್ದ ನಟಿ ಶಿಲ್ಪಾ ಶಿಂದೆ ಆ ಧಾರಾವಾಹಿಯಿಂದ ಹೊರಬಂದ ವಿಚಾರ ಹಳೆಯದೇ ಆದರೂ ಇದೀಗ ನಟಿ ಧಾರಾವಾಹಿಯ ನಿರ್ಮಾಪಕರ ವಿರುದ್ಧ ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪ ಮಾಡಿದ್ದಾರೆ. ‘ಭಾಬಿಜೀ ಘರ್ ಪರ್ ಹೈ’ ಟಿವಿ ಶೋನಲ್ಲಿ ಮುಂದುವರೆಯಲು ತನ್ನೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ನಿರ್ಮಾಪಕ ಸಂಜಯ್ ಕೊಹ್ಲಿ ಒತ್ತಡ ಹೇರಿದ್ದರು ಎಂದು ಆರೋಪಿಸಿ ನಟಿ ಶಿಲ್ಪಾ ದೂರು ದಾಖಲಿಸಿದ್ದಾರೆ. ಭಾಭಿ ಜೀ ಘರ್ ಪರ್ ಹೇ ಹಾಸ್ಯ ಧಾರಾವಾಹಿ ವ್ಯಾಪಕ ಜನಪ್ರಿಯ ಗಳಿಸಿದ ಬೆನ್ನಲ್ಲೇ ನಿರ್ಮಾಪಕ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ. ಅಶ್ಲೀಲ ಜೋಕ್ ಗಳನ್ನು ಹೇಳುವು, ಅಸಭ್ಯವಾಗಿ ವರ್ತಿಸುವುದು, ಫೋಟೋ ಶೂಟ್ ನಲ್ಲಿ ಅನಾವಶ್ಯಕವಾಗಿ ತನ್ನ ಮೈ ಮುಟ್ಟುವುದು ಮಾಡುತ್ತಿದ್ದ. ಆರಂಭದಲ್ಲಿ ನಾನು ಇದನ್ನು ನಿರಾಕರಿಸುತ್ತಾ ಬಂದೆ. ಆದರೆ ಯಾವಾಗ ಇದು ಅತಿರೇಕಕ್ಕೆ ಹೋಯಿತೋ ಆಗ ನಾನು ವಿರೋಧಿಸಿದೆ ಎಂದು ನಟಿ ಶಿಲ್ಪಾ ಶಿಂದೆ ಆರೋಪಿಸಿದ್ದಾರೆ. ಶೋನಲ್ಲಿ ಭಾಗವಹಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ನನ್ನ ಪಾತ್ರ ಜನಪ್ರಿಯವಾಗಿತ್ತು. ಮತ್ತೆ ಶೋನಲ್ಲಿ ನನ್ನ ಪಾತ್ರ ಮುಂದುವರೆಸಲು ತನ್ನೊಂದಿಗೆ ಸಹಕರಿಸುವಂತೆ ನಿರ್ಮಾಪಕ ಬೇಡಿಕೆ ಇಟ್ಟಿದ್ದಾನೆ ಎಂದು ಶಿಲ್ಪಾ ಆರೋಪಿಸಿದ್ದಾರೆ. ಪ್ರತ್ಯಾರೋಪ ಮಾಡಿದ ನಿರ್ಮಾಪಕ ಇನ್ನು ನಟಿ ಶಿಲ್ಪಾ ಶಿಂದೆ ಆರೋಪವನ್ನು ನಿರಾಕರಿಸಿರುವ ನಿರ್ಮಾಪಕ ಸಂಜಯ್ ಕೊಹ್ಲಿ, ನಟಿ ಶಿಲ್ಪಾ ಚಿತ್ರೀಕರಣಕ್ಕೆ ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲ. ವಿನಾಕಾರಣ ಚಿತ್ರೀಕರಣ ತಪ್ಪಿಸಿಕೊಳ್ಳುತ್ತಿದ್ದರು. ಇದರಿಂದ ತಮಗೆ ಸುಮಾರು 12.5 ಕೋಟಿ ನಷ್ಟವಾಗಿದ್ದು, ಈ ಬಗ್ಗೆ ಕೇಳಿದರೆ ತಮ್ಮ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿ ದೂರು ಸಲ್ಲಿಸಿದ್ದಾರೆ. ಪ್ರಸ್ತುತ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತಿದ್ದಾರೆ.