ಹಂಟರ್ ಟ್ರೇಲರ್‌ನಲ್ಲಿ ರಾಧಿಕೆ ಸರಸ...! ಮರಾಠಿ ರಂಗಭೂಮಿಯಿಂದ ಬೆಳಕಿಗೆ ಬಂದ ರಾಧಿಕಾ ಆಪ್ಟೆಗೆ ಚಿತ್ರರಂಗಕ್ಕೆ ಬಂದ ಹತ್ತು ವರ್ಷದ ನಂತರ... ಮರಾಠಿ ರಂಗಭೂಮಿಯಿಂದ ಬೆಳಕಿಗೆ ಬಂದ ರಾಧಿಕಾ ಆಪ್ಟೆಗೆ ಚಿತ್ರರಂಗಕ್ಕೆ ಬಂದ ಹತ್ತು ವರ್ಷದ ನಂತರ ಬೇಡಿಕೆ ಕುದುರಲಾರಂಭಿಸಿದೆ. ಶ್ರೀರಾಮ್ ರಾಘವನ್ ನಿರ್ದೇಶನದ ಬದಲಾಪುರ್ ಇನ್ನೇನು ತೆರೆಗೆ ಬರಲು ಸಿದ್ಧವಾಗುತ್ತಿದ್ದರೆ, ಅನುರಾಗ್ ಕಶ್ಯಪ್ ನಿರ್ಮಾಣದ ಹಂಟರ್ ಚಿತ್ರದ ಬಗ್ಗೆ ಬಾಲಿವುಡ್ಡಿನಾದ್ಯಂತ ಚರ್ಚೆ ಶುರುವಾಗಿದೆ. ಈ ಎರಡೂ ಚಿತ್ರಗಳಲ್ಲಿ ರಾಧಿಕಾ ಆಪ್ಟೆಗೆ ಮಿಂಚಲು ಭರಪೂರ ಅವಕಾಶವಿದೆಯಂತೆ. ಅಭಿನಯಕ್ಕೂ ಗ್ಲಾಮರ್‌ಗೂ ಸಮಾನ ಅವಕಾಶವಿರುವ ಈ ಚಿತ್ರಗಳ ಮೂಲಕ ಈ ವರ್ಷದ ಸಿನಿಮಾ ಅವಾರ್ಡುಗಳು ರಾಧಿಕಾಳನ್ನು ಹುಡುಕಿಕೊಂಡು ಬಂದರೂ ಅಚ್ಚರಿಯಿಲ್ಲ. ಈ ನಡುವೆ ಆಕೆಯ ಅಭಿನಯದ ಶೋರ್ ಇನ್ ದ ಸಿಟಿ ಕೂಡ ಸದ್ದು ಮಾಡಲಾರಂಭಿಸಿದೆ. ಹಂಟರ್ ಚಿತ್ರದ ಟ್ರೇಲರ್‌ಗಳಲ್ಲಿ ಅಡಲ್ಟ್ ಕಾಮಿಡಿಯ ಜೊತೆಗೆ ಧಾರಾಳ ಎಕ್ಸ್‌ಪೋಸ್ ಕೂಡ ಇರೋದರ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದರೆ ರಾಧಿಕಾ ಆಪ್ಟೆ ಸಿನಿಮಾ ನೋಡಿದಾಗ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ ಅಂತಾಳೆ. ಅನುರಾಗ್ ಕಶ್ಯಪ್ ಮತ್ತು ಫ್ಯಾಂಟಮ್ ಫಿಲಮ್ಸ್ ಬ್ಯಾನರ್‌ನಲ್ಲಿ ನಟಿಸೋ ಅವಕಾಶ ಸಿಕ್ಕಿದ್ದಕ್ಕೆ ಥ್ರಿಲ್ ಆಗಿರುವ ರಾಧಿಕಾ, ಪ್ರೇಕ್ಷಕರು ಈವರೆಗೆ ಇಂಥದೊಂದು ಚಿತ್ರ ನೋಡಿರಲು ಸಾಧ್ಯವೇ ಇಲ್ಲ ಎಂದು ಛಾಲೆಂಜ್ ಮಾಡುತ್ತಿದ್ದಾಳೆ.