ರಾಷ್ಟ್ರ ಪ್ರಶಸ್ತಿ ಸಿಕ್ಕರೆ ನಿವೃತ್ತಿಯಾಗ್ತೇನೆ! ನಾನೀಗ ರಾಷ್ಟ್ರ ಪ್ರಶಸ್ತಿಗಾಗಿ ಕಾದಿದ್ದು, ಆ ಪ್ರಶಸ್ತಿ ಪಡೆದ ದಿನ ನಟನೆಗೆ ಗುಡ್‍ಬೈ ಹೇಳಲು ನಿರ್ಧರಿಸಿದ್ದೇನೆ ಎಂದು ಶಾರುಖ್ ಖಾನ್ ಹೇಳಿದ್ದಾರೆ... ನವದೆಹಲಿ: ನಾನೀಗ ರಾಷ್ಟ್ರ ಪ್ರಶಸ್ತಿಗಾಗಿ ಕಾದಿದ್ದು, ಆ ಪ್ರಶಸ್ತಿ ಪಡೆದ ದಿನ ನಟನೆಗೆ ಗುಡ್‍ಬೈ ಹೇಳಲು ನಿರ್ಧರಿಸಿದ್ದೇನೆ ಎಂದು ಶಾರುಖ್ ಖಾನ್ ಹೇಳಿದ್ದಾರೆ. ತಮ್ಮ ಮಹತ್ವಾಕಾಂಕ್ಷೆಯ ಫ್ಯಾನ್ ಸಿನಿಮಾದಲ್ಲಿನ ತಮ್ಮ ದ್ವಿಪಾತ್ರದ ಬಗ್ಗೆ ಮಾತನಾಡುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಫ್ಯಾನ್ ಸಿನಿಮಾದಲ್ಲಿ 24ರ ಹರೆಯದ ಅಭಿಮಾನಿ ಹಾಗೂ ಸೂಪರ್‍ ಸ್ಟಾರ್ ನಟನ ಪಾತ್ರಗಳನ್ನು ಏಕ ಕಾಲಕ್ಕೆ ನಿಭಾಯಿಸುವುದು ತೀರಾ ಸವಾಲಿನದ್ದಾಗಿತ್ತು. ಅದೂ ಈ ವಯಸ್ಸಿನಲ್ಲಿ ಹರೆಯದ ಹುಡುಗನಂತೆ ಕಾಣಲು ಪ್ರತಿದಿನ ಗಂಟೆಗಟ್ಟಲೆ ಪ್ರೊಸ್ತೆಟಿಕ್ಸ್ ಮೇಕಪ್‍ಗೆ ಒಳಗಾಗುವುದು ಯಾತನಾದಾಯಕ. ಹಾಗೇ ಅದೊಂದು ಹುಚ್ಚು ಖುಷಿಯ ಅನುಭವ ಕೂಡ ಎಂದು 50ರ ಹರೆಯದ ನಟ ಹೇಳಿದ್ದಾರೆ. ಅಲ್ಲದೆ ರಾಷ್ಟ್ರ ಪ್ರಶಸ್ತಿ ನನ್ನ ಕನಸು ಎಂದೂ ಹೇಳಿದ್ದಾರೆ.