ಕೈಫು ಹೌಸ್...! ಪಾರ್ಕಲ್ಲಿ... ಬೀಚಲ್ಲೆಲ್ಲ ಫೋಟೊಗ್ರಾಫರ್ಗಳ ಕಣ್ಣಿಗೆ ಬಿದ್ದು ಹೈರಾಣಾಗಿದ್ದ, ಅದಕ್ಕಿಂತಲೂ... ಪಾರ್ಕಲ್ಲಿ... ಬೀಚಲ್ಲೆಲ್ಲ ಫೋಟೊಗ್ರಾಫರ್ಗಳ ಕಣ್ಣಿಗೆ ಬಿದ್ದು ಹೈರಾಣಾಗಿದ್ದ, ಅದಕ್ಕಿಂತಲೂ ಸಲ್ಮಾನ್ ಖಾನ್ ಕೆಂಗಣ್ಣಿಗೆ ಬಿದ್ದಿದ್ದ ಕತ್ರಿನಾ-ರಣಬೀರ್ ಜೋಡಿ, ಔಟ್ ಡೋರ್ ರೊಮ್ಯಾನ್ಸೇ ಬ್ಯಾಡ ಅಂತ ಇಂಡೋರಿಗೆ ಶಿಫ್ಟ್ ಆಗಲು ನಿರ್ಧರಿಸಿದೆಯಂತೆ. ಗಾಳಿಸುದ್ದಿಗಳನ್ನು ನಂಬೋದೇ ಅಂತಾದ್ರೆ ಮನೆ ತಗೊಂಡ್ ನೋಡು ಮದುವೆ ಮಾಡ್ಕೊಂಡ್ ನೋಡು ಅನ್ನೋ ತತ್ವಕ್ಕೆ ಬದ್ಧರಾಗಿರೋ ಈ ಜೋಡಿ, ಮುಂಬಯಿಯ ಬಾಂದ್ರಾ ಬಳಿಯಲ್ಲಿ ಸಾಗರತೀರದಲ್ಲಿ ಹೊಸದೊಂದು ಬಂಗಲೆ ಖರೀದಿ ಮಾಡಿ ಗೃಹಪ್ರವೇಶಕ್ಕೆ ತಮ್ಮ ಆಪ್ತೇಷ್ಟರನ್ನು ಮಾತ್ರ ಆಹ್ವಾನಿಸಿ ಪಾರ್ಟಿ ಕೊಟ್ಟಿದ್ದಾರಂತೆ. ಆಹ್ವಾನಿತರಲ್ಲಿ ಹೃತಿಕ್ ರೋಷನ್, ಕಂಗನಾ, ಅನುಷ್ಕಾ, ಕರಿಷ್ಮಾ ಮುಂತಾದವರು ಪಾರ್ಟಿ ಅಟೆಂಡ್ ಮಾಡಿದ್ದು, ಅವರಲ್ಲೊಬ್ಬರಿಂದ ಸುದ್ದಿ ಆಚೆ ಬಂದಿದೆಯಂತೆ. ರಿಷಿ ಕಪೂರ್ ಅನಾರೋಗ್ಯದ ಕಾರಣ, ರಣಬೀರ್ ಕಪೂರ್ ತಂದೆಯ ಜೊತೆಯೇ ಇರಬೇಕಾಗಿತ್ತಂತೆ. ಇಲ್ಲದಿದ್ದಲ್ಲಿ ಈಗಾಗಲೇ ಹೊಸಮನೆಯ ಗೃಹ ಪ್ರವೇಶವಾಗಿ ಒಂದು ತಿಂಗಳಾಗಿರುತ್ತಿತ್ತಂತೆ! ಏನೇ ಆಗಲಿ ಚಳಿಗಾಲದಲ್ಲಿ ಬೆಚ್ಚನಾ ಮನೆಯಿರುಲು... ಎಂಬ ವಚನದಂತೆ, ಭಾವಿ ಹೆಂಡತಿಯ ಜೊತೆ ಸ್ವರ್ಗಕ್ಕೆ ಕಿಚ್ಚು ಹಚ್ಚಲು ರಣಬೀರ್ ರೆಡಿಯಾಗಿರೋದಂತೂ ಸತ್ಯ! ಕೈಫು ಹೌಸ್...!