ಪಿಂಕಿ, ಡೋಗ್ರಾಗೆ ಗಾಯನ ಪ್ರಶಸ್ತಿ ನಾಯಕಿಯಾಗಿ ಯಶಸ್ಸಿನ ಶಿಖರ ಏರಿಲ್ಲವೆಂದಲ್ಲ. ಆದರೂ ಒಳಗಿನ ತುಡಿತ ಬೇರೆಯೇ. ಅದಕ್ಕಾಗಿಯೇ ಹಪಹಪಿಸುತ್ತಿರುವ... ನಾಯಕಿಯಾಗಿ ಯಶಸ್ಸಿನ ಶಿಖರ ಏರಿಲ್ಲವೆಂದಲ್ಲ. ಆದರೂ ಒಳಗಿನ ತುಡಿತ ಬೇರೆಯೇ. ಅದಕ್ಕಾಗಿಯೇ ಹಪಹಪಿಸುತ್ತಿರುವ ಈ ಹೀರೋಯಿನ್‍ಗಳು ಅಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ವಿಷಯ ಇಷ್ಟೆ. ಪ್ರಿಯಾಂಕ ಚೋಪ್ರಾ, ಮೋನಿಕಾ ಡೋಗ್ರಾ ಮತ್ತು ಇತರ ಮೂವರು ಬಾಲಿವುಡ್ ಮಂದಿ, 2015ರ ಯುರೋಪ್ ಮ್ಯೂಸಿಕ್ ಅವಾರ್ಡ್ಸ್ ಗಳಲ್ಲಿ ಬೆಸ್ಟ್ ಇಂಡಿಯಾ ಆಕ್ಟ್ ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪ್ರಿಯಾಂಕ ಮತ್ತು ಮೋನಿಕಾ ಈಗಾಗಲೇ ಕೆಲವು ಆಲ್ಬಂಗಳನ್ನು ಹೊರತಂದು ತಾವು ಗಾಯನದಲ್ಲೂ ಮುಂದು ಎಂದು ತೋರಿಸಿದ್ದಾರೆ. ಇಲ್ಲಿಂದ ಮುಂದೆ, ಅಭಿಮಾನಿಗಳಿಂದ ಹೆಚ್ಚಿನ ಪ್ರಮಾಣದ ವೋಟ್ ಗಳಿಸಿದರೆ ಇವರು ವರ್ಲ್ಡ್ ವೈಡ್ ಆಕ್ಟ್ ಗೂ ತೇರ್ಗಡೆಯಾಗಲಿದ್ದಾರೆ. ಹೀಗೆ ಗೆದ್ದವರು ಅಕ್ಟೋಬರ್‍ನಲ್ಲಿ ಯುರೋಪ್‍ನಲ್ಲಿ ನಡೆಯಲಿರುವ ವಿಶ್ವ ಸಂಗೀತ ಪ್ರಶಸ್ತಿ ಸಮಾರಂಭದಲ್ಲಿ ತಮ್ಮ ಸಾಮರ್ಥ್ಯ ತೋರಿಸಲಿದ್ದಾರೆ.