'ಸಾಲಾ ಕಡೂಸ್' ವೀಕ್ಷಿಸಲಿರುವ ಪ್ರಕಾಶ್ ಪಡುಕೋಣೆ 'ಸಾಲಾ ಕಡೂಸ್' ಚಿತ್ರತಂಡ, ಟೆನಿಸ್ ತಾರೆ ಪ್ರಕಾಶ್ ಪಡುಕೋಣೆ ಅವರಿಗೆ ಬೆಂಗಳೂರಿನಲ್ಲಿ ಸಿನೆಮಾದ ವಿಶೇಷ ಪ್ರದರ್ಶನ ಏರ್ಪಡಿಸಲಿದ್ದಾರಂತೆ. ಇದು ಕ್ರೀಡೆಯ ಬಗೆಗಿನ ಸಿನೆಮಾ ಬೆಂಗಳೂರು: 'ಸಾಲಾ ಕಡೂಸ್' ಚಿತ್ರತಂಡ, ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಅವರಿಗೆ ಬೆಂಗಳೂರಿನಲ್ಲಿ ಸಿನೆಮಾದ ವಿಶೇಷ ಪ್ರದರ್ಶನ ಏರ್ಪಡಿಸಲಿದ್ದಾರಂತೆ. ಇದು ಕ್ರೀಡೆಯ ಬಗೆಗಿನ ಸಿನೆಮಾ ಆಗಿರುವುದರಿಂದ ಕ್ರೀಡಾಪಟು ಪ್ರಕಾಶ್ ಪಡುಕೋಣೆ ಆಸಕ್ತಿ ತೋರಿದ್ದು, ಕೂಡಲೇ ರಾಜ್ ಕುಮಾರ್ ಹಿರಾನಿ ಮತ್ತು ಮಾಧವನ್ ಇದರ ಪ್ರದರ್ಶನವನ್ನು ಆಯೋಜಿಸಲು ಮುಂದಾಗಿದ್ದಾರೆ. ಮೇರು ಕ್ರೀಡಾಪಟುವಾಗಿರುವ ಪ್ರಕಾಶ್, 'ಸಾಲಾ ಕಡೂಸ್' ಭಾರತದಲ್ಲಿ ಕ್ರೀಡೆಯನ್ನು ಪ್ರಚಾರ ಮಾಡಲು ಸಹಕರಿಸುತ್ತದೆ ಎಂದು ತಿಳಿದಿದ್ದಾರಂತೆ. ಆರ್ ಮಾಧವನ್ ಈ ಸಿನೆಮಾದಲ್ಲಿ ಕೋಚ್ ಪಾತ್ರ ನಿರ್ವಹಿಸಿದ್ದು, ರಿತಿಕಾ ಸಿಂಗ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ೨೯ಕ್ಕೆ ಬಿಡುಗಡೆಯಾಗಲಿರುವ ಈ ಸಿನೆಮಾದ ಪೂರ್ವ ಪ್ರದರ್ಶನವನ್ನು ಜನವರಿ ೨೮ ರಂದು ಆಯೋಜಿಲಸಾಗಿದೆ.