ಹಿಂದೂ ತೀವ್ರವಾದಿಗಳನ್ನು ವಿರೋಧಿಸುತ್ತೇನೆ, ಮುಸ್ಲಿಂ ಮೂಲಭೂತವಾದಿಗಳನ್ನೂ ವಿರೋಧಿಸುತ್ತೇನೆ: ಜಾವೇದ್ ಅಖ್ತರ್ ತಮಗೆ ಮುಸ್ಲಿಮರೂ ಜೀವ ಬೆದರಿಕೆ ಒಡ್ಡಿದ್ದಾರೆ ಹೀಗಾಗಿ ತಾವು ಯಾರೊಬ್ಬರ ಪರವಲ್ಲ. ಜನಸಾಮಾನ್ಯರ ಪರ ಎಂದು ಹೇಳಿದ್ದಾರೆ. ಮುಂಬೈ: ಬಾಲಿವುಡ್ ಗೀತ ರಚನೆಕಾರ ಜಾವೇದ್ ಅಖ್ತರ್ ತಾವು ಜನರನ್ನು ಒಡೆಯುವ ಯಾವುದೇ ಶಕ್ತಿಯನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ. ಮುಸ್ಲಿಂ ಮೂಲಭೂತವಾದಿಗಳನ್ನು, ಹಿಂದೂ ತೀವ್ರವಾದಿಗಳನ್ನೂ ತಾವು ಸಹಿಸುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಆರೆಸ್ಸೆಸ್ ಅನ್ನು ತಾಲಿಬಾನ್ ಜೊತೆ ಹೋಲಿಸುವುದು ಹಿಂದೂ ಸಂಸ್ಕೃತಿ ಅವಮಾನಿಸಿದಂತೆ: ಜಾವೆದ್ ಅಖ್ತರ್ ವಿರುದ್ಧ ಶಿವಸೇನಾ ಆಕ್ರೋಶಇತ್ತೀಚಿಗೆ ಅವರು ತಾಲಿಬಾನ್ ಮತ್ತು ಹಿಂದೂ ತೀವ್ರವಾದಿಗಳ ನಡುವೆ ಹೋಲಿಕೆ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಜಾವೇದ್ ಸ್ಪಷ್ಟನೆ ನೀಡಿದ್ದಾರೆ. ತಮಗೆ ಮುಸ್ಲಿಮರೂ ಜೀವ ಬೆದರಿಕೆ ಒಡ್ಡಿದ್ದಾರೆ ಹೀಗಾಗಿ ತಾವು ಯಾರೊಬ್ಬರ ಪರವಲ್ಲ. ಜನಸಾಮಾನ್ಯರ ಪರ ಎಂದು ಹೇಳಿದ್ದಾರೆ.ಇದನ್ನೂ ಓದಿ: ಜಾವೇದ್ ಅಖ್ತರ್ ಮಾನಹಾನಿ ಪ್ರಕರಣ: ಕಂಗನಾ ಮನವಿ ನ್ಯಾಯಾಲಯದಲ್ಲಿ ವಜಾಭಾರತೀಯರು ಯಾವತ್ತೂ ತಾಲಿಬಾನಿಗಳಾಗಲು ಸಾಧ್ಯವಿಲ್ಲ. ಒಳ್ಲೆಯತನ ಎನ್ನುವುದು ನಮ್ಮೆಲ್ಲರ ವಂಶವಾಹಿಯಲ್ಲೇ ಹರಿಯುತ್ತಿದೆ. ನಾವು ಎಲ್ಲವನ್ನೂ ಸಮತೋಲನ ಮಾಡಲಿಚ್ಛಿಸುವವರು. ಲೆಫ್ಟೂ ಅಲ್ಲ ರೈಟೂ ಅಲ್ಲ ರಸ್ತೆಯ ಮಧ್ಯದಲ್ಲಿರುವವರು ಎಂದು ಅಖ್ತರ್ ಮಾರ್ಮಿಕವಾಗಿ ನುಡಿದಿದ್ದಾರೆ.ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಕೋರ್ಟ್ ಮೊರೆ ಹೋದ ಜಾವೇದ್ ಅಖ್ತರ್ಜಾವೇದ್ ಅಖ್ತರ್ ಮಾನನಷ್ಟ ಪ್ರಕರಣ: ನಟಿ ಕಂಗನಾ ರನೌತ್ ವಿರುದ್ಧ ವಾರಂಟ್ ಜಾರಿಜಾವೇದ್ ಅಖ್ತರ್ ಮಾನಹಾನಿ ಪ್ರಕರಣ: ಕಂಗನಾ ಮನವಿ ನ್ಯಾಯಾಲಯದಲ್ಲಿ ವಜಾ