ಸನ್ನಿ ಲಿಯೊನ್ ಇಂದಾಗಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ: ರಾಖಿ ಸಾವಂತ್ ನೀಲಿ ತಾರೆ ನಟಿ ಸನ್ನಿ ಲಿಯೊನ್ ರ ಕಾಂಡೋಮ್ ಜಾಹಿರಾತು ಮತ್ತು ಅವರು ಅಭಿನಯಿಸಿರುವ ಸೆಕ್ಸಿ ಹಾಡುಗಳು ಪುರುಷರನ್ನು ಉದ್ರೇಕಿಸುತ್ತದೆ ಹೀಗಾಗಿ ಅತ್ಯಾಚಾರ... ಮುಂಬೈ: ನೀಲಿ ತಾರೆ ನಟಿ ಸನ್ನಿ ಲಿಯೊನ್ ರ ಕಾಂಡೋಮ್ ಜಾಹಿರಾತು ಮತ್ತು ಅವರು ಅಭಿನಯಿಸಿರುವ ಸೆಕ್ಸಿ ಹಾಡುಗಳು ಪುರುಷರನ್ನು ಉದ್ರೇಕಿಸುತ್ತದೆ ಹೀಗಾಗಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಐಟಂ ಗರ್ಲ್ ರಾಖಿ ಸಾವಂತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸನ್ನಿ ಲಿಯೊನ್ರಿಂದಾಗಿಯೇ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಿಪಿಐ ನಾಯಕ ಅತುಲ್ ಕುಮಾರ್ ಹೇಳಿ ವಿವಾದಕ್ಕೆ ಕಾರಣವಾಗಿದ್ದರು. ಇದೀಗ ಸನ್ನಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ರಾಖಿ ಸಾವಂತ್ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಸದಾ ವಿವಾದಾತ್ಮಕ, ಅಸಂಬದ್ಧ ಹೇಳಿಕೆಗಳನ್ನು ನೀಡುವುದರ ಮೂಲಕ ಸುದ್ದಿಯಾಗುವ ರಾಖಿ, ಸನ್ನಿಗೆ ಅಪಮಾನ ಮಾಡಲು ಸಿಕ್ಕುವ ಯಾವುದೇ ಅವಕಾಶಗಳನ್ನು ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ. ಈ ಬಾರಿ ಸಹ ಅವರ ಸನ್ನಿ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಇತ್ತೀಚೆಗೆ ಮುಂಬೈಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನಟಿ ರಾಖಿ, ಒಂದು ವೇಳೆ ಸನ್ನಿ ಲಿಯೋನ್‌ಗೆ ಭಾರತೀಯ ಚಿತ್ರರಂಗದಲ್ಲಿ ನಟಿಸಬೇಕು ಎನ್ನುವ ಇಚ್ಚೆಯಿದ್ದರೆ ಮೈ ತುಂಬಾ ಬಟ್ಟೆ ತೊಡುವುದನ್ನು ಕಲಿಯಲಿ. ಇಲ್ಲದಿದ್ದರೆ ಈ ಕೂಡಲೇ ಸನ್ನಿಯನ್ನು ದೇಶದಿಂದ ಗಡೀಪಾರು ಮಾಡಬೇಕು ಎಂದು ಗುಡುಗಿದ್ದಾಳೆ.