ನಾನಿನ್ನೂ ಗರ್ಭಿಣಿ ಆಗಿಲ್ಲ, ಸದ್ಯಕ್ಕಂತೂ ಆಗಲ್ಲ: ವಿವಾಹದ ಬಗ್ಗೆ ನಟಿ ತಾಪ್ಸಿ ಪನ್ನು ಕಾಮೆಂಟ್! ನಟಿ ತಾಪ್ಸಿ ಪನ್ನು ತನ್ನ ಚಿತ್ರಗಳಿಗಿಂತ ವಿವಾದಗಳು ಮತ್ತು ಕಾಮೆಂಟ್‌ಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಕಂಗನಾ ಜತೆಗಿನ ವಿವಾದ, ಸೌತ್ ಸಿನಿಮಾಗಳ ಬಗ್ಗೆ ನೆಗೆಟಿವ್ ಕಾಮೆಂಟ್ಸ್.. ಹೀಗೆ ಹಲವು ಬಾರಿ ವಿವಾದಕ್ಕೆ ಸಿಲುಕಿದ್ದವರು ತಾಪ್ಸಿ. ಮುಂಬೈ: ನಟಿ ತಾಪ್ಸಿ ಪನ್ನು ತನ್ನ ಚಿತ್ರಗಳಿಗಿಂತ ವಿವಾದಗಳು ಮತ್ತು ಕಾಮೆಂಟ್‌ಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಕಂಗನಾ ಜತೆಗಿನ ವಿವಾದ, ಸೌತ್ ಸಿನಿಮಾಗಳ ಬಗ್ಗೆ ನೆಗೆಟಿವ್ ಕಾಮೆಂಟ್ಸ್.. ಹೀಗೆ ಹಲವು ಬಾರಿ ವಿವಾದಕ್ಕೆ ಸಿಲುಕಿದ್ದವರು ತಾಪ್ಸಿ. ಇತ್ತೀಚೆಗಷ್ಟೇ ತಾಪ್ಸಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿರುವುದು ಸಖತ್ ಸುದ್ದಿಯಲ್ಲಿದೆ.ಯಾವಾಗ ಮದುವೆ ಅಂತ ಕೇಳುತ್ತಿದ್ದೀರಿ. ನಾನಿನ್ನೂ ಗರ್ಭಿಣಿ ಆಗಿಲ್ಲ. ಸದ್ಯಕ್ಕಂತೂ ಆಗಲ್ಲ. ಆದಾಗ ನಿಮಗೆ ತಿಳಿಸುತ್ತೇನೆ’ ಎಂದು ತಾಪ್ಸಿ ಪನ್ನು ಉತ್ತರಿಸಿದ್ದಾರೆ. ‘ಮಕ್ಕಳನ್ನು ಪಡೆಯಬೇಕು ಎನಿಸಿದಾಗ ನಾನು ಮದುವೆ ಆಗುತ್ತೇನೆ’ ಎಂದು ಈ ಹಿಂದಿನ ಸಂದರ್ಶನದಲ್ಲಿ ಅವರು ಹೇಳಿದ್ದರು. ಅವರಿಗೆ ಈಗ 35 ವರ್ಷ ವಯಸ್ಸು.ತಾಪ್ಸಿ ಪನ್ನು ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ರಾಜ್ಕುಮಾರ್ ಹಿರಾನಿ ನಿರ್ದೇಶನ ಮಾಡುತ್ತಿರುವ ‘ಡಂಕಿ’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ನಟಿಸುವ ಅವಕಾಶ ತಾಪ್ಸಿಗೆ ಸಿಕ್ಕಿದೆ. ಆ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಇದಲ್ಲದೇ, ‘ಏಲಿಯನ್’, ‘ಜನ ಗಣ ಮನ’, ‘ಓ ಲಡ್ಕಿ ಹೈ ಕಹಾ’, ‘ಫಿರ್ ಆಯಿ ಹಸೀನ್ ದಿಲ್ರುಬಾ’ ಮುಂತಾದ ಸಿನಿಮಾಗಳಲ್ಲಿ ತಾಪ್ಸಿ ಪನ್ನು ನಟಿಸುತ್ತಿದ್ದಾರೆ.ಇದನ್ನೂ ಓದಿ: ಡೇಟಿಂಗ್ ನಡೆಸುತ್ತಿರುವುದು ನಿಜ, ಮಗು ಬೇಕೆಂದಾಗ ಮದುವೆ ಆಗ್ತೀನಿ: ತಾಪ್ಸಿ ಪನ್ನುಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಿದರು ಮತ್ತು ಅವರು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು. ನೆಟ್ಟಿಗರೊಬ್ಬರು ಯಾವಾಗ ಮದುವೆಯಾಗುತ್ತಾರೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ತಾಪ್ಸಿ.. ಯಾಕೆ ಮದುವೆಯಾಗಬೇಕು, ನಾನು ಮದುವೆಯಾಗಲು ಗರ್ಭಿಣಿಯಲ್ಲ. ನಾನು ಇಷ್ಟು ಬೇಗ ಮದುವೆಯಾಗುವುದಿಲ್ಲ. ನಾನು ನಿಮಗೆಲ್ಲರಿಗೂ ತಿಳಿಸುತ್ತೇನೆಂದು ತಾಪ್ಸಿ ನಗುತ್ತಾ ವ್ಯಂಗ್ಯವಾಗಿ ಈ ಉತ್ತರವನ್ನು ಹೇಳಿದರು, ಆದರೆ ಮದುವೆಯ ಬಗ್ಗೆ ತಾಪ್ಸಿಯ ಈ ಕಾಮೆಂಟ್‌ಗಳು ವೈರಲ್ ಆಗಿವೆ. ಮತ್ತೊಮ್ಮೆ ನೆಟಿಜನ್‌ಗಳು ತಾಪ್ಸಿಯನ್ನು ಟೀಕಿಸುತ್ತಿದ್ದಾರೆ.