ಕತ್ರೀನಾ-ರಣಬೀರ್ ನೂತನ ಬಂಗಲೆಗೆ ಸಿಸಿಟಿವಿ? ಮನೆ ತಗೊಂಡ್ ನೋಡು ಮದುವೆ ಮಾಡ್ಕೊಂಡ್ ನೋಡು ಅನ್ನೋ ತತ್ವಕ್ಕೆ ಬದ್ಧರಾಗಿರೋ... ಮನೆ ತಗೊಂಡ್ ನೋಡು ಮದುವೆ ಮಾಡ್ಕೊಂಡ್ ನೋಡು ಅನ್ನೋ ತತ್ವಕ್ಕೆ ಬದ್ಧರಾಗಿರೋ ಕತ್ರಿನಾ-ರಣಬೀರ್ ಜೋಡಿ, ತಮ್ಮ ನೂತನ ಬಂಗಲೆಗೆ ಸಿಸಿಟಿವಿ ಅಳವಡಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಮುಂಬೈನ ಬಾಂದ್ರಾ ಬಳಿಯ ಸಾಗರತೀರದಲ್ಲಿ ಹೊಸದೊಂದು ಬಂಗಲೆ ಖರೀದಿಸಿ ಗೃಹ ಪ್ರವೇಶಕ್ಕೆ ತಮ್ಮ ಆಪ್ತರನ್ನಷ್ಟೇ ಆಹ್ವಾನಿಸಿ ಪಾರ್ಟಿ ಕೊಟ್ಟಿದ್ದ ಈ ಜೋಡಿ, ಇದೀಗ ಸುರಕ್ಷತೆಗಾಗಿ ತಮ್ಮ ನೂತನ ಬಂಗಲೆಯ ಸುತ್ತಾ ಮುತ್ತಾ ಸಿಸಿಟಿವಿ ಅಳವಡಿಕೆ ಮುಂದಾಗಿದ್ದಾರೆ. ಭದ್ರತೆ ಮತ್ತು ಖಾಸಗಿ ಜೀವನಕ್ಕೆ ಯಾವುದೇ ರೀತಿಯ ತೊಂದೆರಯಾಗಬಾರದೆಂಬ ಉದ್ದೇಶದಿಂದ ಈ ಜೋಡಿ ಈ ನಿರ್ಧಾರ ತೆಗದುಕೊಂಡಿದ್ದು, ಸಿಸಿಟಿವಿ ಅಳವಡಿಕೆಗೆ ಮುಂದಾಗಿದ್ದಾರಂತೆ. ಗಾಳಿಮಾತಿನ ಪ್ರಕಾರ ಈ ಜೋಡಿ ಈಗಾಗಲೇ ನೂತನ ಬಂಗಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗುತ್ತಿದೆ. ಏನೇ ಆಗಲಿ ಚಳಿಗಾಲದಲ್ಲಿ ಬೆಚ್ಚನೆ ಮನೆಯಿರಲು... ಎಂಬ ವಚನದಂತೆ, ಭಾವಿ ಹೆಂಡತಿಯ ಜೊತೆ ಸ್ವರ್ಗಕ್ಕೆ ಕಿಚ್ಚು ಹಚ್ಚಲು ರಣಬೀರ್ ರೆಡಿಯಾಗಿರೋದಂತೂ ಸುಳ್ಳಲ್ಲ.