ಸಿನಿಮಾ ನನಗೆ ಶಾಶ್ವತವಲ್ಲ: ಬೆಳ್ಳಿತೆರೆ ಬಗ್ಗೆ ಸನ್ನಿ ಲಿಯೋನ್ ವೈರಾಗ್ಯ ಪೋರ್ನ್ ಸಿನಿಮಾಗಳಿಂದ ಬಾಲಿವುಡ್‌ಗೆ ಬಂದು ಸಕ್ಸಸ್‌ಫುಲ್‌ ಸ್ಟಾರ್‌ ಆಗಿ ಮಿಂಚುತ್ತಿರುವ ಸನ್ನಿ ಲಿಯೋನ್ ಗೆ ಸಿನಿಮಾ ಬಗ್ಗೆ ವೈರಾಗ್ಯ ಮೂಡಿದಂತಿದೆ... ಮುಂಬಯಿ: ಪೋರ್ನ್ ಸಿನಿಮಾಗಳಿಂದ ಬಾಲಿವುಡ್‌ಗೆ ಬಂದು ಸಕ್ಸಸ್‌ಫುಲ್‌ ಸ್ಟಾರ್‌ ಆಗಿ ಮಿಂಚುತ್ತಿರುವ ಸನ್ನಿ ಲಿಯೋನ್ ಗೆ ಸಿನಿಮಾ ಬಗ್ಗೆ ವೈರಾಗ್ಯ ಮೂಡಿದಂತಿದೆ. ಅಡಲ್ಟ್ ಸಿನಿಮಾಗಳ ನಟಿ ಎನ್ನುವ ಬ್ರ್ಯಾಂಡ್ ಇಮೇಜ್‌ ಬದಲಿಸಿಕೊಳ್ಳಲು ಯತ್ನಿಸುತ್ತಿರುವ ಸನ್ನಿ ಬಂದ ಅವಕಾಶಗಳನ್ನೆಲ್ಲಾ ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಮನರಂಜನೆಯೇ ಆಗಲಿ, ವ್ಯಾಪಾರವೇ ಆಗಲಿ, ಆಗಾಗ್ಗೆ ಹೊಸ ಹೊಸ ಮಾರ್ಗ, ಅನ್ವೇಷಣೆಗೆ ಒಳಗಾಗುತ್ತಿರಬೇಕು. ಇಲ್ಲದಿದ್ದರೆ ಸಿಕ್ಕಿದ ಯಶಸ್ಸನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ಸನ್ನಿಲಿಯೋನ್ ಹೇಳುವ ಮೂಲಕ ಸಿನಿಮಾ ರಂಗದಲ್ಲಿ ತಾನು ಹೆಚ್ಚು ಸಮಯ ಇರಲಾರೆನು ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾಳೆ. ಚಿತ್ರರಂಗಕ್ಕೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಅನಿರೀಕ್ಷಿತವಾಗಿ ಈ ರಂಗಕ್ಕೆ ಬಂದಿದ್ದೇನೆ. ಸಿನಿಮಾಗಳು ನನಗೆ ಶಾಶ್ವತವಲ್ಲ. ಜೀವನ ಪೂರ್ತಿ ಚಿತ್ರರಂಗದಲ್ಲೇ ಇರಲಾರೆ ಅಂತಲೂ ಸನ್ನಿ ಹೇಳಿಕೊಂಡಿದ್ದಾರೆ. ಹೇಳೋದು ಮಾತ್ರವಲ್ಲ ಈಗಾಗಲೇ ಸನ್ನಿ ಹೊಸ ದಾರಿ ಕೂಡಾ ಕಂಡುಕೊಂಡಿದ್ದಾರೆ. ರಾಗಿಣಿ ಎಂಎಂಎಸ್, ಮಸ್ತಿಜಾದೇ,ಜಾಕ್ ಪಾಟ್, ಏಕ್ ಪಹೇಲಿ ಲೀಲಾ ಚಿತ್ರಗಳಲ್ಲಿ ಅಭಿನಯಿಸಿರುವ ಸನ್ನಿ ಲಿಯೋನ್ ಇತ್ತೀಚೆಗೆ ಶಾರೂಖ್ ಖಾನ್ ಅಭಿನಯದ ರಾಯೀಸ್ ಚಿತ್ರದ ಐಟಂ ಸಾಂಗ್ ವೊಂದಕ್ಕೆ ಹೆಜ್ಜೆ ಹಾಕಿದ್ದಾಳೆ. ತಾನು ತನ್ನ ಪತಿ ಇಬ್ಬರು ಲೆಕ್ಕಾಚಾರ ಉಳ್ಳವರಾಗಿದ್ದೇವೆ ಎಂದು ಹೇಳಿರುವ ಸನ್ನಿ ಅಭಿನಯದ ಜಿಸ್ಮ್-2 ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ. ಇನ್ನೂ ಸನ್ನಿ ಲಿಯೋನ್ ಲಸ್ಟ್ ಎಂಬ ತನ್ನದೇ ಪರ್ಫ್ಯೂಮ್ ಬ್ರ್ಯಾಂಡ್ ಹೊರ ತಂದಿದ್ದಾರೆ.