ಫೋರ್ಬ್ಸ್ ಪಟ್ಟಿ ಪ್ರಕಟ: ಹೆಚ್ಚಿನ ಸಂಭಾವನೆ ಪಡೆಯುವ ವಿಶ್ವದ 100 ಸೆಲೆಬ್ರಿಟಿಗಳಲ್ಲಿ ಅಕ್ಷಯ್ ಕುಮಾರ್ ಗೆ ಸ್ಥಾನ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ 100 ಸೆಲೆಬ್ರಿಟಿಗಳನ್ನೊಳಗೊಂಡ ಪೋರ್ಬ್ಸ್ ವಾರ್ಷಿಕ ಪಟ್ಟಿ ಪ್ರಕಟಗೊಂಡಿದ್ದು, ಕಳೆದ ವರ್ಷದಂತೆ ಈ ವರ್ಷವೂ ಕೂಡಾ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ. ನವದೆಹಲಿ: ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ 100 ಸೆಲೆಬ್ರಿಟಿಗಳನ್ನೊಳಗೊಂಡ ಪೋರ್ಬ್ಸ್ ವಾರ್ಷಿಕ ಪಟ್ಟಿ ಪ್ರಕಟಗೊಂಡಿದ್ದು, ಕಳೆದ ವರ್ಷದಂತೆ ಈ ವರ್ಷವೂ ಕೂಡಾ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ.ಆದಾಗ್ಯೂ, ಕಳೆದ ವರ್ಷ 65 ಮಿಲಿಯನ್ ಡಾಲರ್ ಸಂಪಾದನೆಯೊಂದಿಗೆ 33 ಸ್ಥಾನದಲ್ಲಿದ್ದ ಅಕ್ಷಯ್ ಕುಮಾರ್ ಈ ಬಾರಿ ಅಂದಾಜು 48.5 ಮಿಲಿಯನ್ ಡಾಲರ್ ನೊಂದಿಗೆ 52ನೇ ಸ್ಥಾನಕ್ಕೆ ಕುಸಿದಿದ್ದಾರೆ. ಹಾಲಿವುಡ್ ದಿಗ್ಗಜ ವಿಲ್ ಸ್ಮಿತ್ ಅವರಂತಹ ನಟರನ್ನು 52 ವರ್ಷದ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಹಿಂದಿಕ್ಕಿದ್ದಾರೆ. 44.5 ಮಿಲಿಯನ್ ಡಾಲರ್ ಸಂಪಾದನೆಯೊಂದಿಗೆ ವಿಲ್ ಸ್ಮಿತ್ 69ನೇ ಸ್ಥಾನದಲ್ಲಿದ್ದಾರೆ. ಏಂಜಲೀನಾ ಜೋಲಿ 35.5 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ 99ನೇ ಸ್ಥಾನದಲ್ಲಿದ್ದಾರೆ. ಅಕ್ಷಯ್ ಕುಮಾರ್ ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರೆಂದು ಪೋರ್ಬ್ಸ್ ಬಣ್ಣಿಸಿದೆ. ಕೊರೋನಾ ವಿರುದ್ಧಧ ಹೋರಾಟಕ್ಕಾಗಿ ಅವರು 4.5 ಮಿಲಿಯನ್ ಡಾಲರ್ ನಷ್ಟು ನೆರವು ನೀಡಿದ್ದಾರೆ. ! - 100 :) # (@) 16, 2019 7:40am