ಕೋವಿಡ್-19 ಪೀಡಿತರಿಗಾಗಿ 1 ಕೋಟಿ ರೂ. ದೇಣಿಗೆ ಪ್ರಕಟಿಸಿದ ನಟ ಅಕ್ಷಯ್ ಕುಮಾರ್! ಕೋವಿಡ್-19 ಪೀಡಿತರ ನೆರವಿಗಾಗಿ ದೆಹಲಿ ಮೂಲದ ಗೌತಮ್ ಗಂಭೀರ್ ಫೌಂಡೇಶನ್ ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ 1 ಕೋಟಿ ರೂ.ದೇಣಿಗೆಯನ್ನು ಪ್ರಕಟಿಸಿದ್ದಾರೆ. ನವದೆಹಲಿ: ಕೋವಿಡ್-19 ಪೀಡಿತರ ನೆರವಿಗಾಗಿ ದೆಹಲಿ ಮೂಲದ ಗೌತಮ್ ಗಂಭೀರ್ ಫೌಂಡೇಶನ್ ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ 1 ಕೋಟಿ ರೂ.ದೇಣಿಗೆಯನ್ನು ಪ್ರಕಟಿಸಿದ್ದಾರೆ.ಇದಕ್ಕಾಗಿ ಅಕ್ಷಯ್ ಕುಮಾರ್ ಅವರಿಗೆ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿರುವ ಗೌತಮ್ ಗಂಭೀರ್, ಈ ಕತ್ತಲೆಯಲ್ಲಿ ಪ್ರತಿಯೊಂದು ಸಹಾಯವು ಭರವಸೆಯ ಕಿರಣವಾಗಿ ಮೂಡುತ್ತದೆ. ಕೊರೋನಾ ಪೀಡಿತರಿಗೆ ಆಹಾರ, ಹಾಸಿಗೆ, ಆಕ್ಸಿಜನ್ ಮತ್ತಿತರ ಅಗತ್ಯ ಸೌಲಭ್ಯ ಕಲ್ಪಿಸಲು ಗೌತಮ್ ಗಂಭೀರ್ ಫೌಂಡೇಶನ್ ಗೆ 1 ಕೋಟಿ ನೀಡಿದ್ದಕ್ಕಾಗಿ ಅಕ್ಷಯ್ ಕುಮಾರ್ ಗೆ ಧನ್ಯವಾದ, ದೇವರು ಒಳ್ಳೆಯದು ಮಾಡಲಿ ಎಂದು ಗಂಭೀರ್ ಬರೆದುಕೊಂಡಿದ್ದಾರೆ. . @ 1 # , ! # @ggf_indiaಗೌತಮ್ ಗಂಭೀರ್ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಅಕ್ಷಯ್ ಕುಮಾರ್, ಒಳ್ಳೆಯ ದಿನಗಳಿಗಾಗಿ ಎದುರು ನೋಡುತ್ತಿದ್ದೇನೆ. ಇದು ನಿಜವಾಗಿಯೂ ಕಠಿಣ ಸಂದರ್ಭವಾಗಿದೆ .ಗೌತಮ್ ಗಂಭೀರ್, ನಾನು ಸಹಾಯ ಮಾಡಿದ್ದಕ್ಕೆ ಸಂತೋಷವಾಗಿದೆ. ನಾವೆಲ್ಲರೂ ಶೀಘ್ರದಲ್ಲೇ ಈ ಬಿಕ್ಕಟ್ಟಿನಿಂದ ಹೊರಬರಲು ಹಾರೈಸುತ್ತೇನೆ ಸುರಕ್ಷಿತವಾಗಿರಿ ಎಂದಿದ್ದಾರೆ. , @. . .