ತಾಪ್ಸಿ ಪನ್ನುಗೆ ಇದು ಉತ್ತಮ ವರ್ಷವಾಗಿದೆ ! ಬಾಲಿವುಡ್ ನಟಿ ತಾಪ್ಸಿ ಪನ್ನು ಸೂಪರ್ ಹಿಟ್ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ದೋಚುತ್ತಿದ್ದು, ವೃತ್ತಿರಂಗದಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ. 2018 ತನ್ನ ಪಾಲಿಗೆ ಉತ್ತಮ ವರ್ಷ . ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನವದೆಹಲಿ: ಬಾಲಿವುಡ್ ನಟಿ ತಾಪ್ಸಿ ಪನ್ನು ಸೂಪರ್ ಹಿಟ್ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ದೋಚುತ್ತಿದ್ದು, ವೃತ್ತಿರಂಗದಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ. 2018 ತನ್ನ ಪಾಲಿಗೆ ಉತ್ತಮ ವರ್ಷ . ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನ ವೃತ್ತಿ ಜೀವನದ ಹಾದಿ ಈಗ ಹೆಚ್ಚಿನದ್ದಾಗಿ ತೆರೆದಿರುವುದಾಗಿ ಅವರು ಬರೆದುಕೊಂಡಿದ್ದಾರೆ. ಆಕೆ ಅಭಿನಯದ ಇತ್ತೀಚಿಗೆ ಬಿಡುಗಡೆಗೊಂಡ ಮ್ಯಾನ್ ಮರ್ಜಿಯನ್ ಸೇರಿದಂತೆ ಐದು ಸೂಪರ್ ಹಿಟ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನನ್ನ ಮುಖದಲ್ಲಿ ದೊಡ್ಡ ಮೊಗಳ್ನಗೆ ಕಾಣುತ್ತಿದೆ. ಈ ವರ್ಷ ತನ್ನ ಪಾಲಿಗೆ ಉತ್ತಮವಾಗಿದ್ದು, ಇದರಲ್ಲಿ ಭಾಗಿಯಾದ ಪ್ರಕಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಆಕೆ ಬರೆದುಕೊಂಡಿದ್ದಾಳೆ. ,