ಭಾರತದ ಮೊದಲ ಗಗನಯಾನಿ ರಾಕೇಶ್ ಶರ್ಮಾ ಬಯೊಪಿಕ್ ಸಿನಿಮಾ: ಸಾರೆ ಜಹಾಂಸೆ ಅಚ್ಚಾ ನಿರ್ಮಾಣಕ್ಕೆ ಚಾಲನೆ ರಾಕೇಶ್ ಶರ್ಮಾ ಪಾತ್ರದಲ್ಲಿ ಆಮೀರ್ ಖಾನ್ ಮತ್ತು ಶಾರುಖ್ ಖಾನ್ ನಟಿಸುವರೆಂದು ಹೇಳಲಾಗಿತ್ತು. ಆದರೆ ಅವರಿಬ್ಬರ ಹೆಸರುಗಳು ನಂತರ ಡ್ರಾಪ್ ಆಗಿತ್ತು. ಮುಂಬೈ: ಭಾರತದ ಮೊದಲ ಗಗನಯಾನಿ ರಾಕೇಶ್ ಶರ್ಮಾ ಜೀವನಾಧಾರಿತ ಸಿನಿಮಾ 'ಸಾರೆ ಜಹಾಂಸೆ ಅಚ್ಚಾ' ಖಂಡಿತವಾಗಿ ನಿರ್ಮಾಣಗೊಳ್ಳಲಿದೆ ಎಂದು ದೇಶದ ಪ್ರಖ್ಯಾತ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಹೇಳಿದ್ದಾರೆ. ಈ ಸಿನಿಮಾ ತಮ್ಮ ಜೀವನಕ್ಕೆ ತುಂಬಝತ್ತಿರವಾದುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಬರುತ್ತಿದೆ ಭಾರತದ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಬಯೋಪಿಕ್ ಸಿನಿಮಾಈ ಸಿನಿಮಾದ ಚಿತ್ರಕಥೆಯನ್ನು ಅಂಜುಂ ರಾಜಬಲಿ ರಚಿಸಲಿದ್ದು, ನಿರ್ದೇಶನದ ಜವಾಬ್ದಾರಿ ಮಹೇಶ್ ಮಥಾಯಿ ಅವರ ಹೆಗಲೇರಿದೆ. ಸಿದ್ಧಾರ್ಥ್ ರಾಯ್ ಕಪೂರ್ ಅವರ ನೂತನ ವೆಬ್ ಸಿರೀಸ್ ಅರಣ್ಯಕ್ ಗೆ ನೆಟ್ ಫ್ಲಿಕ್ಸ್ ನಲ್ಲಿ ವ್ಯಾಪಕ ಮನ್ನಣೆ ದೊರೆಯುತ್ತಿದೆ. ಇದನ್ನೂ ಓದಿ: ಮ್ಯಾಟ್ರಿಕ್ಸ್ ಹಾಲಿವುಡ್ ಸಿನಿಮಾದಲ್ಲಿ ಅಲ್ಪ ಅವಧಿಯ ಪಾತ್ರಕ್ಕೆ ಟ್ರೋಲ್: ಕಿಡಿ ಕಾರಿದ ಪ್ರಿಯಾಂಕ ಚೋಪ್ರಾಇದೀಗ ಹಲವು ವರ್ಷಗಳ ಹಿಂದೆಯೇ ಶುರುವಾಗಬೇಕಿದ್ದ ರಾಕೇಶ್ ಶರ್ಮಾ ಬಯೋಪಿಕ್ ಸಿನಿಮಾಗೆ ಮತ್ತೆ ಮರುಜೀವ ದೊರೆತಿದೆ. ರಾಕೇಶ್ ಶರ್ಮಾ 1984ರಲ್ಲಿ ಗಗನಯಾನ ಮಾಡಿದ್ದರು. ರಾಕೇಶ್ ಶರ್ಮಾ ಪಾತ್ರದಲ್ಲಿ ಆಮೀರ್ ಖಾನ್ ಮತ್ತು ಶಾರುಖ್ ಖಾನ್ ನಟಿಸುವರೆಂದು ಹೇಳಲಾಗಿತ್ತು. ಆದರೆ ಅವರಿಬ್ಬರ ಹೆಸರುಗಳು ನಂತರ ಡ್ರಾಪ್ ಆಗಿತ್ತು.ಇದನ್ನೂ ಓದಿ: ನಾನೆಂದೂ ಅಶ್ಲೀಲ ಚಿತ್ರ ತಯಾರಿಕೆಯಲ್ಲಿ ತೊಡಗಿರಲಿಲ್ಲ: ಮೊದಲ ಬಾರಿಗೆ ರಾಜ್ ಕುಂದ್ರಾ ಹೇಳಿಕೆಇದೀಗ ಸಾರೆ ಜಹಾಂಸೆ ಅಚ್ಚಾ ನಾಯಕ ಪಾತ್ರಕ್ಕೆ ರಣ್ ಬೀರ್ ಕಪೂರ್, ವಿಕ್ಕಿ ಕೌಶಲ್ ಮತ್ತು ಫರ್ಹಾನ್ ಅಖ್ತರ್ ಹೆಸರು ಕೇಳಿಬರುತ್ತಿವೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಸಿನಿಮಾ ತಂಡ ಬಿಟ್ಟುಕೊಟ್ಟಿಲ್ಲ.ಇದನ್ನೂ ಓದಿ: ಬಾಲಿವುಡ್ ನಟಿ ಆಲಿಯಾ ಭಟ್ ವಿರುದ್ಧ ಎಫ್ ಐ ಆರ್!