ಬಾಲಿವುಡ್ ನಲ್ಲಿ ಯಶಸ್ವಿ 23 ವರ್ಷ ಪೂರೈಸಿದ ಶಾರೂಖ್ ಖಾನ್ ಕಿರುತೆರೆ ಮೂಲಕ ಸಿನಿಮಾ ರಂಗವನ್ನ ಪ್ರವೇಶಿಸಿದ ಬಾಲಿವುಡ್ ನಲ್ಲಿ ತನ್ನ ಅಜಾನುಬಾಹು ಚಾಚಿರುವ ನಟ, ಸೂಪರ್ ಸ್ಟಾರ್... ಮುಂಬಯಿ: ಕಿರುತೆರೆ ಮೂಲಕ ಸಿನಿಮಾ ರಂಗವನ್ನ ಪ್ರವೇಶಿಸಿದ ಬಾಲಿವುಡ್ ನಲ್ಲಿ ತನ್ನ ಅಜಾನುಬಾಹು ಚಾಚಿರುವ ನಟ, ಸೂಪರ್ ಸ್ಟಾರ್, ಶಾರುಖ್ ಖಾನ್ ಹಿಂದಿ ಸಿನಿಮಾ ರಂಗಕ್ಕೆ ಕಾಲಿಟ್ಟು 23 ವರ್ಷ ಪೂರೈಸಿದ್ದಾರೆ. 23 ವರ್ಷದ ಹಿಂದೆ ದೀವಾನ ಹಿಂದಿ ಚಿತ್ರದ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ ಶಾರೂಖ್ ಬೆಳೆದ ರೀತಿಯೇ ವಿಸ್ಮಯ. ಹಿಂದೆ ತಿರುಗಿ ನೋಡದೆ ಬೆಳದು ಯಶಸ್ಸು, ಕೀರ್ತಿ ಸಂಪಾದಿಸಿದ್ರು ಶಾರೂಖ್ ಖಾನ್. 23 ವರ್ಷಗಳಲ್ಲಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೈಕ್ಷಕರನ್ನು ರಂಜಿಸಿರುವ ಕಿಂಗ್ ಖಾನ್ ಶಾರೂಖ್ ಜಾಗತಿಕ ಮಟ್ಟದಲ್ಲಿ ಬಾಲಿವುಡ್ ಚಿತ್ರ ರಂಗವನ್ನು ಪ್ರತಿನಿಧಿಸಿದ್ದಾರೆ. ಬಾಜಿಗರ್, ಢರ್, ಕರಣ್ ಅರ್ಜುನ್, ದಿಲ್ ವಾಲೆ ದುಲ್ಹನಿಯಾ ಲೇ ಜಾಯಂಗೆ ಯಂತ ಹಿಟ್ ಸಿನಿಮಾಗಳನ್ನು ನೀಡಿದರು. ಸತತ 23 ವರ್ಷಗಳಿಂದ ಬಾಕ್ಸ್ ಆಫೀಸ್ ಕಿಂಗ್ ಆಗಿರುವ ಶಾರೂಕ್ ಖಾನ್ ಮುಂದಿನ ಪಯಣವು ಯಶಸ್ವಿಯಾಗಿರಲಿ ಎಂಬುದು ಕೋಟ್ಯಂತರ ಅಭಿಮಾನಿಗಳ ಹರಿಕೆ ಹಾರೈಕೆ.