ಫರ್ಹಾನ್ ಅಖ್ತರ್ -ಅಧುನಾ ವಿಚ್ಛೇದನ ಬಾಲಿವುಡ್ ನ ಮತ್ತೊಂದು ಜೋಡಿ ವಿಚ್ಛೇದನಗೊಳ್ಳುತ್ತಿದೆ. ಖ್ಯಾತ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ಅವರ ಪತ್ನಿ ಕೇಶ... ಮುಂಬೈ: ಬಾಲಿವುಡ್ ನ ಮತ್ತೊಂದು ಜೋಡಿ ವಿಚ್ಛೇದನಗೊಳ್ಳುತ್ತಿದೆ. ಖ್ಯಾತ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ಅವರ ಪತ್ನಿ ಕೇಶ ವಿನ್ಯಾಸಕಿ ಅಧುನಾ ತಮ್ಮ 16 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಿದ್ದಾರೆ. ತಮ್ಮ ಪ್ರಚಾರಕರ ಮೂಲಕ ಹೇಳಿಕೆ ನೀಡಿರುವ ಅವರು, ತಾವಿಬ್ಬರೂ ಸೌಹಾರ್ದತೆಯಿಂದ ಮತ್ತು ಪರಸ್ಪರವ ಒಪ್ಪಿಗೆ ಮೇರೆಗೆ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ. ನಾವಿಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ದೂರವಾಗುತ್ತಿದ್ದೇವೆ. ಆದರೂ ನಮ್ಮ ಜೀವನದಲ್ಲಿ ಮಕ್ಕಳು ಪ್ರಾಮುಖ್ಯರಾಗಿರುತ್ತಾರೆ. ಜವಬ್ದಾರಿಯುತ ಪೋಷಕರಾಗಿ, ನಮ್ಮ ಈ ನಿರ್ಧಾರ ಮಕ್ಕಳ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಅಥವಾ ಸಾರ್ವಜನಿಕವಾಗಿ ಅನಗತ್ಯ ಚರ್ಚೆಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಕೋರುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. 2000ರಲ್ಲಿ ಫ‌ರ್ಹಾನ್‌ ನಿರ್ದೇಶಿಸಿದ್ದ ಮೊದಲ ಚಿತ್ರ 'ದಿಲ್‌ ಚಾಹತಾ ಹೈ'ಯ ಚಿತ್ರೀಕರಣ ವೇಳೆ ಇಬ್ಬರೂ ಪರಸ್ಪರ ಪ್ರೀತಿಸಿ, ಮದುವೆಯಾಗಿದ್ದರು. ಅವರಿಗೆ ಶುಕ್ಲ ಮತ್ತು ಆಖಿರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಅಧುನಾ ಬಿ ಬ್ಲಂಟ್ ಸೆಲೂನ್ ನ ಸಹ ಮಾಲಿಕರು ಆಗಿದ್ದಾರೆ.