ನಾವು ಒಟ್ಟಿಗೆ ಕೆಲಸ ಮಾಡದಿದ್ದರೂ ನಾನಂತೂ ಅಮೀರ್ ಅಭಿಮಾನಿ: ಸನ್ನಿ ಲಿಯೋನ್ ಬಾಲಿವುಡ್ ನಟ ಅಮೀರ್ ಖಾನ್ ಜೊತೆ ನಟಿಸಲು ಸಾಧ್ಯವಾಗುತ್ತದೋ ಇಲ್ಲವೋ ಆದರೆ ಅವರ ಅಭಿಮಾನಿಯಾಗಿ ಉಳಿಯುತ್ತೇನೆ ಎಂದಿದ್ದಾರೆ ನಟಿ ಸನ್ನಿ ಲಿಯೋನ್ ನವದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಜೊತೆ ನಟಿಸಲು ಸಾಧ್ಯವಾಗುತ್ತದೋ ಇಲ್ಲವೋ ಆದರೆ ಅವರ ಅಭಿಮಾನಿಯಾಗಿ ಉಳಿಯುತ್ತೇನೆ ಎಂದಿದ್ದಾರೆ ನಟಿ ಸನ್ನಿ ಲಿಯೋನ್. ಇತ್ತೀಚೆಗಷ್ಟೇ ಚರ್ಚೆಗೆ ಗ್ರಾಸವಾಗಿದ್ದ ಸನ್ನಿ ಲಿಯೋನ್ ಸಂದರ್ಶನದ ಪರವಾಗಿ ನಿಂತಿದ್ದ ಅಮೀರ್ ಖಾನ್, ನಿಮ್ಮ ಹಿಂದಿನ ಜೀವನದ ಬಗ್ಗೆ ನನಗೆ ತೊಂದರೆಯಿಲ್ಲ ಸಾಧ್ಯವಾದರೆ ನಿಮ್ಮ ಜೊತೆಗೆ ನಟಿಸುವ ಆಸಕ್ತಿಯಿದೆ ಎಂದಿದ್ದರು. ಅಮೀರ್ ಖಾನ್ ನೀಡಿರುವ ಬೆಂಬಲದ ಬಗ್ಗೆ ಅವರ ಅನಿಸಿಕೆಯೇನು ಏನೆಂಬ ಪ್ರಶ್ನೆಗೆ "ನಾನಿನ್ನೂ ಅವರು ಹೇಳಿದ್ದನ್ನು ಜೀರ್ಣಿಸಿಕೊಳ್ಳುತ್ತಿದ್ದೇನೆ... ನನಗೆ ಒಂದು ರೀತಿಯ ಆಘಾತವಾಗಿದೆ. ಅಮೀರ್ ಖಾನ್ ಜೊತೆ ನಟಿಸಲು ಸಾಧ್ಯವಾಗುತ್ತದೋ ಇಲ್ಲವೋ ಆದರೆ ಅವರ ಅಭಿಮಾನಿಯಾಗಿ ಉಳಿಯುತ್ತೇನೆ" ಎಂದಿದ್ದಾರೆ ಸನ್ನಿ. ಹಿಂದೆ ಪೋರ್ನ್ ಸಿನೆಮಾಗಳಲ್ಲಿ ನಟಿಸುತ್ತಿದ್ದ ಸನ್ನಿ ಈಗ ಬಾಲಿವುಡ್ ಗೆ ಬಂದಿದ್ದಾರೆ. ಇವರ ಬಹು ಚರ್ಚಿತ ಸಂದರ್ಶನವನ್ನು ಪತ್ರಕರ್ತ ಭುಪೇಂದ್ರ ಚೌಬೆ ನಡೆಸಿಕೊಟ್ಟಿದ್ದರು.