ಪ್ರಪಂಚದಲ್ಲಿಯೇ ಕತ್ರೀನಾ ಕೈಫ್ ಗೆ ಅತಿ ಮೆಚ್ಚಿನ ವ್ಯಕ್ತಿ ಯಾರು ಗೊತ್ತಾ? ಬಾಲಿವುಡ್ ಬ್ಯೂಟಿ ಕತ್ರೀನಾ ಕೈಫ್ ಇಡೀ ಪ್ರಪಂಚದಲ್ಲಿಯೇ ಒಬ್ಬರೇ ಒಬ್ಬರು ಮಾತ್ರ ಈಕೆಗೆ ಅಚ್ಚು ಮೆಚ್ಚಂತೆ. ಆಕೆಯ ಹಳೇಯ ಬಾಯ್ ಫ್ರೆಂಡ್..,. ನವದೆಹಲಿ: ಬಾಲಿವುಡ್ ಬ್ಯೂಟಿ ಕತ್ರೀನಾ ಕೈಫ್ ಇಡೀ ಪ್ರಪಂಚದಲ್ಲಿಯೇ ಒಬ್ಬರೇ ಒಬ್ಬರು ಮಾತ್ರ ಈಕೆಗೆ ಅಚ್ಚು ಮೆಚ್ಚಂತೆ. ಆಕೆಯ ಹಳೇಯ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಅಂತಾ ಗೆಸ್ ಮಾಡಬೇಡಿ. ಇತ್ತೀಚೆಗೆ ಕತ್ರಿನಾ ಫೇಸ್ ಬುಕ್ ಗಳಲ್ಲಿ ಹಾಕಿಕೊಂಡಿರುವ ಫೋಟೋ ಕ್ಯಾಫ್ಷನ್ ನಲ್ಲಿ ಈ ವಿಷಯ ಬಹಿರಂಗವಾಗಿದೆ. ಪ್ರಖ್ಯಾತ ನಿರ್ಮಾಪಕ ಕರಣ್ ಜೋಹರ್ ಜೊತೆಗಿನ ಸೆಲ್ಫಿಯನ್ನು ಕತ್ರೀನಾ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದಾಳೆ. ಜೊತೆಗೆ ' ' ಅಂತಾ ಕ್ಯಾಪ್ಷನ್ ಹಾಕಿದ್ದಾಳೆ. ಇತ್ತೀಚಿನ ಹೊಸ ಸಿನಿಮಾ ಬಾರ್ ಬಾರ್ ದೇಖೋ ಶೂಟಿಂಗ್ ನಂತರ ಕತ್ರೀನಾ ಕಾಫಿ ವಿತ್ ಕರಣ್ ಕಾರ್ಯ ಕ್ರಮದಲ್ಲಿ ಭಾಗಿಯಾಗಿದ್ದಳು ಎಂದು ಹೇಳಲಾಗುತ್ತಿದೆ. ಕಾಫಿ ವಿತ್ ಕರಣ್ ಮುಂಬರುವ ಸೀಸನ್ ನ ನಲ್ಲಿ ಭಾಗಿಯಾದ ಮೊದಲ ಸೆಲೆಬ್ರಿಟಿ ಕತ್ರೀನಾ ಎಂದು ಹೇಳಲಾಗುತ್ತಿದೆ.