ಪ್ರಿಯಾಂಕಾ ಚೋಪ್ರಾ ಟೈಮ್ಸ್ ನ ಅತ್ಯಂತ ಅಪೇಕ್ಷಿತ ಮಹಿಳೆ 2015ನೇ ಸಾಲಿನ ಟೈಮ್ಸ್ 50 ಅತ್ಯಂತ ಅಪೇಕ್ಷಿತ ಮಹಿಳೆಯರ ( ) ಪಟ್ಟಿಯಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ... ಮುಂಬೈ: 2015ನೇ ಸಾಲಿನ ಟೈಮ್ಸ್ 50 ಅತ್ಯಂತ ಅಪೇಕ್ಷಿತ ಮಹಿಳೆಯರ ( ) ಪಟ್ಟಿಯಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮೊದಲ ಸ್ಥಾನ ಪಡೆದಿದ್ದಾರೆ. ಆನ್ ಲೈನ್ ಮೂಲಕ ಪಡೆದ ಮತಗಳು ಮತ್ತು ಆಯೋಜಕರ ಮತ ಪರಿಗಣಿಸಿ ಪಟ್ಟಿ ತಯಾರಿಸಲಾಗಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಟೈಮ್ ಮ್ಯಾಗಜೀನ್ ನಡೆಸುವ 100 ಪ್ರಮುಖ ಪ್ರಭಾವಿ ವ್ಯಕ್ತಿಗಳಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ಆಸ್ಕರ್ ಪ್ರಶಸ್ತಿ ವೇದಿಕೆ ಹಂಚಿಕೊಂಡಿದ್ದ, ತೀರಾ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಅಮೆರಿಕದ ಕ್ವಾಂಟಿಕೋ ಟಿವಿ ಸಿರೀಸ್ ನಲ್ಲಿ ಭಾಗವಹಿಸಿ ಜನಮೆಚ್ಚುಗೆ ಗಳಿಸಿದ ಪ್ರಿಯಾಂಕ, ಹಾಲಿವುಡ್ ಸಿನಿಮಾ ಬೇವಾಚ್ ನಲ್ಲಿ ಸಹ ನಟಿಸಿದ್ದಾರೆ. ಟೈಮ್ಸ್ ಮ್ಯಾಗಜಿನ್ ನ ಅರ್ಹ ಮಹಿಳೆ ಎಂದು ಗುರುತಿಸಿಕೊಂಡು ಪ್ರಿಯಾಂಕ ಗೆಲುವಿನ ಅಭಿಯಾನ ಮುಂದುವರಿಸಿದ್ದಾರೆ. ಅವರ ನಂತರ ದೀಪಿಕಾ ಪಡುಕೋಣೆ ಮತ್ತು ಸನ್ನಿ ಲಿಯೋನ್ ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿದ್ದಾರೆ.