ಸನ್ನಿ ಜತೆ ಕಿಕ್ಕು-ಕ್ಲಿಕ್ಕು ಸನ್ನಿಲಿಯೋನ್ 'ಒನ್ ನೈಟ್ ಸ್ಟ್ಯಾಂಡ್‌'ಗೆ ಐದು ಕೋಟಿ ತೆಗೆದುಕೊಳ್ಳುತ್ತಿದ್ದಾಳೆ ಎಂಬ ಸುದ್ದಿ... ಸನ್ನಿಲಿಯೋನ್ 'ಒನ್ ನೈಟ್ ಸ್ಟ್ಯಾಂಡ್‌'ಗೆ ಐದು ಕೋಟಿ ತೆಗೆದುಕೊಳ್ಳುತ್ತಿದ್ದಾಳೆ ಎಂಬ ಸುದ್ದಿ ನೋಡಿ ಭಾರತದ ಕೋಟ್ಯಾಧೀಶರು 'ಚೆಕ್ ಆರ್ ಕ್ಯಾಶ್?' ಅಂತ ಕ್ಯೂ ನಿಂತಾಗಲೇ ಗೊತ್ತಾದದ್ದು ಅದು ಸಿನಿಮಾ ಹೆಸರು ಅಂತ. ಆ ಚಿತ್ರಕ್ಕೆ ಐದು ಕೋಟಿ ಸಂಭಾವನೆ ತೆಗೆದುಕೊಂಡಿರುವ ಸನ್ನಿ. ಸಿನಿಮಾದ ಮೂಲಕವೇ ನಿರಾಶರಾದವರನ್ನು ಸಮಾಧಾನಗೊಳಿಸಲಿದ್ದಾಳಂತೆ. ಆ ಬಗೆಯ ದೃಶ್ಯಗಳು ಚಿತ್ರದಲ್ಲಿರುತ್ತವಂತೆ. ಸನ್ನಿ ಸದ್ಯಕ್ಕೆ ತನ್ನ ನೂರು ಮಂದಿ ಅಭಿಮಾನಿಗಳಿಗೆ ಹೊಸದೊಂದು ಆಫರ್ ನೀಡಿದ್ದಾಳೆ. 'ಫುಲ್ ಮೀಲ್ಸ್ ಮಿಸ್ ಆದರೇನಂತೆ ಎಣ್ಣೆ ಹೊಡ್ಕೊಂಡು ಡಿನ್ನರ್ ಮುಗಿಸ್ಕೊಂಡು ಹೋಗಿ..ಜೊತೇಲಿ ನಾನಿರ್ತೀನಿ' ಇದು ಆಫರ್‌ನ ಒನ್‌ಲೈನ್ ಸಾರಾಂಶ. ಮ್ಯಾನ್ ಕೈಂಡ್ ಫಾರ್ಮಾದ ಅಡಿಕ್ಷನ್ ಡಿಯೋ ನಡೆಸಿದ್ದ ಸ್ಪರ್ಧೆಯಲ್ಲಿ ಕಾರ್ಡನ್ನು 'ಉಜ್ಜಿ' ಗೆದ್ದಿರುವ ವಿಜೇತರಿಗೆ ಸನ್ನಲಿಯೋನ್‌ಳೊಂದಿಗೆ ಕೂತು ಕುಡಿದು ಟೈಟ್ ಆಗಿ ಊಟ ಮಾಡಿ ಬರುವ ಅವಕಾಶ ದೊರಕಿದೆ. ಪ್ರತಿದಿನವೂ ವಿಜೇತರ ಹೆಸರು ಪ್ರಾಡಕ್ಟ್‌ನ ಫೇಸ್ ಬುಕ್ ಪುಟದಲ್ಲಿ ಪ್ರಕಟವೂ ಆಗುತ್ತಿತ್ತು. ಮೂರು ತಿಂಗಳು ನಡೆದ ಸ್ಪರ್ಧೆಯಲ್ಲಿ ಒಟ್ಟು ನೂರು ವಿಜೇತರಿಗೆ ಸನ್ನಿಯೊದಿಗೆ ಸೆಲ್ಫೀ ತೆಗೆದುಕೊಳ್ಳುವ ಅವಕಾಶವೂ ಸಿಕ್ಕಿದೆ. ಒಟ್ಟಾರೆ ಸನ್ನಿಲಿಯೋನ್ ಬಾಲಿವುಡ್‌ನ ಎಲ್ಲ ಜನಪ್ರಿಯ ನಟಿಯರನ್ನೂ ಸದ್ದಿಲ್ಲದೆ ಹಿಂದಿಕ್ಕುತ್ತಿರುವುದಂತೂ ಸತ್ಯವೆನಿಸುತ್ತಿದೆ.