200 ಕೋಟಿಗೆ ಬ್ಲ್ಯಾಕ್ ಮೇಲ್ ಮಾಡಿದ ನಟಿ ಬಂಧನ: ದೆಹಲಿ ಪೊಲೀಸರ ಕಾರ್ಯಾಚರಣೆ ಬಾಯ್ ಫ್ರೆಂಡ್ ಸುಕೇಶ್ ಜೊತೆ ಸೇರಿ ಉದ್ಯಮಿಯ ಪತ್ನಿಗೆ 200 ಕೋಟಿ ರೂ.ಗೆ ಬ್ಲ್ಯಾಕ್ ಮೇಲ್ ಮಾಡಿದ್ದರು. ಕೇರಳ ಮೂಲದ ನಟಿ ಲೀನಾ ಹಿಂದಿ ಸಿನಿಮಾ ಮದ್ರಾಸ್ ಕೆಫೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನವದೆಹಲಿ: ದೆಹಲಿ ಪೊಲೀಸರು ಲೀನಾ ಮರಿಯಾ ಪೌಲ್ ರನ್ನು 200 ಕೋಟಿಗೆ ಬ್ಲ್ಯಾಕ್ ಮಾಡಿದ ಆರೋಪದ ಮೇಲೆ ಬಂಧಿಸಿದ್ದಾರೆ. ಸುಕೇಶ್ ಚಂದ್ರಶೇಖರ್ ಎಂಬಾತ ಆಕೆಯ ಬಾಯ್ ಫ್ರೆಂಡ್ ಆಗಿದ್ದ.ಅವನು ಉದ್ಯಮಿಯ ಪತ್ನಿಗೆ 200 ಕೋಟಿ ಬ್ಲ್ಯಾಕ್ ಮೇಲ್ ಗೆ ಒತ್ತಾಯಿಸಿದ್ದ. ಲೀನಾ ಕೂಡಾ ತನ್ನ ಬಾಯ್ ಫ್ರೆಂಡ್ ಕುಕೃತ್ಯದಲ್ಲಿ ಶಾಮೀಲಾಗಿದ್ದಳು ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರು: ಖಾಸಗಿ ವಿಡಿಯೋ ಬಹಿರಂಗಗೊಳಿಸುವ ಬೆದರಿಕೆಯೊಡ್ಡಿ ಹಣ ಪೀಕಿದ್ದ ಎಫ್ಬಿ ಸ್ನೇಹಿತೆ ವಿರುದ್ದ ಬಿಪಿಒ ಉದ್ಯೋಗಿ ದೂರುಫೋರ್ಟಿಸ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಅಧಿಕಾರಿಯಾಗಿದ್ದ ಶಿವಿಂದರ್ ಮೋಹನ್ ಎಂಬುವವರು ಹವಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದರು. ಈ ಸಂದರ್ಭ ಶಿವಿಂದರ್ ಪತ್ನಿಯನ್ನು ಸಂಪರ್ಕಿಸಿದ್ದ ಆರೋಪಿಗಳು 200 ಕೋಟಿ ರೂ. ಕೊಟ್ಟರೆ ಪತಿಯನ್ನು ಬಿಡುಗಡೆ ಮಾಡಿಸುವುದಾಗಿ ಒತ್ತಾಯಿಸಿದ್ದರು. ಇಲ್ಲದೇ ಹೋದರೆ ತಮ್ಮ ಬಳಿ ಇರುವ ದಾಖಲೆಗಳನ್ನು ಪೊಲೀಸರಿಗೆ ನೀಡಿ ಶಿವಿಂದರ್ ಜೈಲಿನಿಂದ ಹೊರಬಾರದಂತೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ಈ ಸಂಬಂಧ ಉದ್ಯಮಿ ಪತ್ನಿ ಎಫ್ ಐ ಆರ್ ದಾಖಲಿಸಿದ್ದರು. ಆರೋಪಿ ಸುಕೇಶ್ ಚಂದ್ರಶೇಖರ್ ವಿರುದ್ಧ 21 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಡ್ರಗ್ಸ್ ಕೇಸ್: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಬಂಧನಅಶ್ಲೀಲ ಚಿತ್ರ ಪ್ರಕರಣ: ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾಗೆ ಸಮನ್ಸ್!ವಂಚನೆ ಪ್ರಕರಣ: ಬಾಲಿವುಡ್ ನಟಿ ಶಿಲ್ಪಾಶೆಟ್ಟಿಗೆ ಲಕ್ನೋ ಪೊಲೀಸರಿಂದ ನೋಟೀಸ್