'ಬಾಜಿರಾವ್ ಮಸ್ತಾನಿ' ನನ್ನ ವೃತ್ತಿಜೀವನದ ಅತಿ ಕಷ್ಟದ ಸಿನೆಮಾ: ದೀಪಿಕಾ ಸಂಜಯ್ ಲೀಲಾ ಭನ್ಸಾಲಿ ಅವರ ಐತಿಹಾಸಿಕ ಪ್ರೇಮ ಕಥೆಯುಳ್ಳ ಸಿನೆಮಾ 'ಭಾಜಿರಾವ್ ಮಸ್ತಾನಿ'ಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಈ ಸಿನೆಮಾ ದೈಹಿಕವಾಗಿ, ಮಾನಸಿಕವಾಗಿ ಗುರಗಾಂವ್: ಸಂಜಯ್ ಲೀಲಾ ಭನ್ಸಾಲಿ ಅವರ ಐತಿಹಾಸಿಕ ಪ್ರೇಮ ಕಥೆಯುಳ್ಳ ಸಿನೆಮಾ 'ಭಾಜಿರಾವ್ ಮಸ್ತಾನಿ'ಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಈ ಸಿನೆಮಾ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ದಣಿವು ಉಂಟು ಮಾಡಿತು ಎಂದಿದ್ದಾರೆ. "ನನ್ನ ವೃತ್ತಿಜೀವನದಲ್ಲೇ ಅತಿ ಕಷ್ಟಕರವಾದ ಸಿನೆಮಾ ಇದು. ಅತಿ ಹೆಚ್ಚು ದಣಿವುಂಟುಮಾಡಿದ ಸಿನೆಮಾ. ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ. ಸಿನೆಮಾ ಕಥೆ ಮತ್ತು ಅದರ ನಿರ್ದೇಶಕ ಅಂತಹ ಬೇಡಿಕೆಯಿಟ್ಟಿದ್ದರು" ಎಂದು ಸಿನೆಮಾದ ಹಾಡೊಂದರ ಬಿಡುಗಡೆ ವೇಳೆಯಲ್ಲಿ ತಿಳಿಸಿದ್ದಾರೆ. ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಪ್ರವಾಸ ೨೦೧೫ ರ ಮೊದಲನೇ ದಿನ 'ದಿವಾನಿ ಮಸ್ತಾನಿ' ಎಂಬ ಶೀರ್ಷಿಕೆ ಹಾಡಿನ್ನು ಬಿಡುಗಡೆ ಮಾಡಿ ದೀಪಿಕಾ ಮಾತನಾಡಿದ್ದಾರೆ. ಸಂಜಯ್ ಲೀಲಾ ಭನ್ಸಾಲಿ ಜೊತೆಗೆ ದೀಪಿಕಾ ಅವರಿಗೆ ಎರಡನೇ ಸಿನೆಮಾ ಇದು. ರಣವೀರ್ ಸಿಂಗ್ ಮತ್ತು ಪ್ರಿಯಾಂಕ ಚೋಪ್ರಾ ಕೂಡ ನಟಿಸಿರುವ ಈ ಸಿನೆಮಾ ಡಿಸೆಂಬರ್ ೧೮ ರಂದು ಬಿಡುಗಡೆಯಾಗಲಿದೆ.