ಸಾವಿನ ವದಂತಿ: ತಮ್ಮದೇ ಹಾಸ್ಯ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ ಬಾಲಿವುಡ್ ಖ್ಯಾತ ನಟ ಪರೇಶ್ ರಾವಲ್ ನಟ ಪರೇಶ್ ರಾವಲ್ ವಿಧಿವಶರಾಗಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ಗಮನಿಸಿದ ಪರೇಶ್ ರಾವಲ್ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬೈ: ನಟ ಪರೇಶ್ ರಾವಲ್ ವಿಧಿವಶರಾಗಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ಗಮನಿಸಿದ ಪರೇಶ್ ರಾವಲ್ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.ಮಹಾಮಾರಿ ಕೊರೋನಾ ಸಾಕಷ್ಟು ಸೆಲೆಬ್ರಿಟಿಗಳನ್ನು ಬಲಿಪಡೆದುಕೊಳ್ಳುತ್ತಿದೆ. ಸಾಂಕ್ರಾಮಿಕ ರೋಗ ಪರಿಣಾಮ ಪ್ರತೀನಿತ್ಯ ಕೆಟ್ಟ ಸುದ್ದಿಗಳನ್ನೇ ಕೇಳುವಂತಾಗಿದೆ. ಆದರೆ, ಈ ಸಂದರ್ಭವನ್ನು ಕೆಲವು ಕಿಡಿಕೇಡಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಲೈಕ್ ಹಾಗೂ ಫಾಲೋವರ್ಸ್ ಗಳನ್ನು ಪಡೆಯುವ ಸಲುವಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಇದಕ್ಕಾಗಿ ಸೆಲೆಬ್ರಿಟಿಗಳ ನಿಧನದ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಬಾಲಿವುಡ್ ನಟ ಲಕ್ಕಿ ಅಲಿ ನಿಧನ ಕುರಿತ ವದಂತಿ ಬಳಿಕ ಇದೀಗ ಬಾಲಿವುಡ್ ಖ್ಯಾತ ನಟ ಪರೇಶ್ ರಾವಲ್ ನಿಧನ ಕುರಿತಂತೆಯೂ ವದಂತಿಗಳು ಹಬ್ಬಿದೆ. ತಮ್ಮ ಸಾವಿನ ವದಂತಿಯ ಬಗ್ಗೆ ಹಾಸ್ಯ ಮಿಶ್ರಿತವಾಗಿ ಟ್ವೀಟ್ ಮಾಡಿರುವ ಪರೇಶ್ ರಾವಲ್ ಅವರು, ನಾನು 7 ಗಂಟೆ ಸುಮಾರಿಗೆ ನಿದ್ದೆ ಮಾಡಿದ್ದೆ. ನೀವು ತಪ್ಪಾಗಿ ಭಾವಿಸಿದ್ದೀರಾ.. ಕ್ಷಮೆ ಇರಲಿ ಎಂದು ಹೇಳಿದ್ದಾರೆ. ... 7am ...! ../3m7j8J54NFಈ ಹಿಂದೆ ಕನ್ನಡದ ಖ್ಯಾತ ಹಾಸ್ಯ ನಟ ದೊಡ್ಡಣ್ಣ ಅವರ ಬಗ್ಗೆಯೂ ಇಂತಹದ್ದೇ ವದಂತಿ ಹರಿದಾಡಿತ್ತು. ಬಳಿಕ ದೊಡ್ಡಣ್ಣ ಅವರೇ ವಿಡಿಯೋ ಮಾಡಿ, ''ವದಂತಿಗಳನ್ನು ಹಬ್ಬಿಸಿಬೇಡಿ, ನಾನು ಆರೋಗ್ಯವಾಗಿದ್ದೇನೆ'' ಎಂದು ತಿಳಿಸಿದ್ದರು.