ಹಾಲಿವುಡ್‍ಗೆ ಹಾರಲಿರುವ ಹೃತಿಕ್ ಕಹೋ ನಾ ಪ್ಯಾರ್ ಹೈ' ಚಿತ್ರದ ಮೂಲಕ ಬಾಲಿವುಡ್ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಇದೇ ವರ್ಷ ಹಾಲಿವುಡ್ ಅಂಗಳಕ್ಕೆ ಕಾಲಿಡಲಿದ್ದಾರಂತೆ... ಕಹೋ ನಾ ಪ್ಯಾರ್ ಹೈ' ಚಿತ್ರದ ಮೂಲಕ ಬಾಲಿವುಡ್ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಇದೇ ವರ್ಷ ಹಾಲಿವುಡ್ ಅಂಗಳಕ್ಕೆ ಕಾಲಿಡಲಿದ್ದಾರಂತೆ. ಬಾಲಿವುಡ್ ಮತ್ತು ಹಾಲಿವುಡ್‍ನಲ್ಲಿ ಗ್ರೀಕ್ ಗಾಡ್' ಅಂತಲೇ ಜನಪ್ರಿಯ ರಾಗಿರುವ ಹೃತಿಕ್ ರೋಷನ್, ಹಾಲಿವುಡ್‍ಗೆ ವರ್ಷಗಳ ಹಿಂದೆಯೇ ಹಾರಬೇಕಿತ್ತು. ಪಿಂಕ್ ಪ್ಯಾಂಥರ್-2' ಸೇರಿದಂತೆ ಅನೇಕ ಹಾಲಿವುಡ್ ಆಫರ್ ಗಳನ್ನ ರಿಜೆಕ್ಟ್ ಮಾಡಿದ್ದ ಬಾಲಿವುಡ್ ಡ್ರೀಮ್ ಬಾಯ್, ಕೊನೆಗೂ ಆಂಗ್ಲ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಈ ವರ್ಷ ನನ್ನ ಹಾಲಿವುಡ್ ಸಿನಿಮಾಗೆ ಚಾಲನೆ ಸಿಗಲಿದೆ' ಅಂತ ಖುದ್ದು ಹೃತಿಕ್ ರೋಷನ್ ಅವರೇ ಕನ್ಫರ್ಮ್ ಮಾಡಿದ್ದಾರೆ. ಅಷ್ಟು ಬಿಟ್ಟರೆ, ಯಾವ ಚಿತ್ರ, ಚಿತ್ರದ ನಿರ್ದೇಶಕ ಯಾರು, ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ, ತಂತ್ರಜ್ಞರ ಕುರಿತು ಹೃತಿಕ್ ಎಲ್ಲೂ ಮಾತನಾಡಿಲ್ಲ. ಈಗ ಆಶುತೋಷ್ ಗೋವಾರಿಕರ್ ನಿರ್ದೇಶನದ 'ಮೊಹೆಂಜೋ ದಾರೋ' ಚಿತ್ರದಲ್ಲಿ ಬಿಜಿಯಾಗಿರುವ ಹೃತಿಕ್, ಚಿತ್ರ ಕಂಪ್ಲೀಟ್ ಆದ ತಕ್ಷಣ ಹಾಲಿವುಡ್‍ಗೆ ಹಾರಲಿದ್ದಾರಂತೆ. ಆಲ್ ದಿ ಬೆಸ್ಟ್ ಹೃತಿಕ್!