ಬಾಲಿವುಡ್‌ ಗಾಯಕ ಹನಿ ಸಿಂಗ್‌ ವಿರುದ್ದ ಗೃಹ ಹಿಂಸೆ ಪ್ರಕರಣ ದಾಖಲಿಸಿದ ಪತ್ನಿ ಶಾಲಿನಿ ತಲ್ವಾರ್! ಬಾಲಿವುಡ್ ಗಾಯಕ, ನಟ ಯೋಯೋ ಹನಿ ಸಿಂಗ್‌ ವಿರುದ್ದ ಅವರ ಪತ್ನಿ ಶಾಲಿನಿ ತಲ್ವಾರ್ ಗೃಹ ಹಿಂಸೆ, ಲೈಂಗಿಕ ಕಿರುಕುಳ, ಹಣಕಾಸು ವಂಚನೆ, ಮಾನಸಿಕ ಹಿಂಸೆಯ ಪ್ರಕರಣ ದಾಖಲಿಸಿದ್ದಾರೆ. ನವದೆಹಲಿ: ಪ್ರಮುಖ ಬಾಲಿವುಡ್ ಗಾಯಕ, ನಟ ಯೋಯೋ ಹನಿ ಸಿಂಗ್‌ ವಿರುದ್ದ ಅವರ ಪತ್ನಿ ಶಾಲಿನಿ ತಲ್ವಾರ್ ಗೃಹ ಹಿಂಸೆ, ಲೈಂಗಿಕ ಕಿರುಕುಳ, ಹಣಕಾಸು ವಂಚನೆ, ಮಾನಸಿಕ ಹಿಂಸೆಯ ಪ್ರಕರಣ ದಾಖಲಿಸಿದ್ದಾರೆ.ಮಂಗಳವಾರ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ 'ಗೃಹ ಹಿಂಸೆಯಿಂದ ಮಹಿಳೆಯರ ರಕ್ಷಣೆ' ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ತೀಸ್‌ ಹಜಾರಿ ಕೋರ್ಟ್ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ ತಾನಿಯಾ ಸಿಂಗ್ ಮುಂದೆ ಪ್ರಕರಣ ದಾಖಲಿಸಲಾಗಿದೆ.ಈ ಸಂಬಂಧ ನ್ಯಾಯಾಲಯ ಹನಿ ಸಿಂಗ್‌ ಅವರಿಗೆ ನೋಟೀಸ್‌ ಜಾರಿ ಮಾಡಿದೆ. ಆಗಸ್ಟ್ 28 ರೊಳಗೆ ಸಮಜಾಯಿಷಿ ನೀಡುವಂತೆ ಆದೇಶಿಸಲಾಗಿದೆ. ಹನಿ ಸಿಂಗ್, ಅವರ ಪತ್ನಿ ಹೆಸರಿನಲ್ಲಿರುವ ಜಂಟಿ ಆಸ್ತಿಗಳ ತಂಟೆಗೆ ಹೋಗದಂತೆ ಶಾಲಿನಿ ತಲ್ವಾರ್‌ ಅವರ ಪರವಾಗಿ ನ್ಯಾಯಾಲಯ ಮಧ್ಯಂತರ ಆದೇಶಗಳನ್ನು ಜಾರಿಗೊಳಿಸಿದೆ.