ಅಮಿತಾಬ್ ಜೊತೆ ಅಜಯ್ ದೇವ್ಗನ್ ಮುಂದಿನ ಚಿತ್ರ 'ಮೇಡೆ' ಬಾಲಿವುಡ್‌ನ ಸಿಂಗಮ್ ಸ್ಟಾರ್ ಅಜಯ್ ದೇವ್‌ಗನ್ ಅವರು ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರೊಂದಿಗೆ ಚಿತ್ರ ಮಾಡಲಿದ್ದಾರೆ. ನವದೆಹಲಿ: ಬಾಲಿವುಡ್‌ನ ಸಿಂಗಮ್ ಸ್ಟಾರ್ ಅಜಯ್ ದೇವ್‌ಗನ್ ಅವರು ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರೊಂದಿಗೆ ಚಿತ್ರ ಮಾಡಲಿದ್ದಾರೆ. ಅಮಿತಾಭ್ ಮತ್ತು ಅಜಯ್ ಅವರು 'ಮೇಜರ್ ಸಹಾಬ್', 'ಖಾಕಿ', 'ಸತ್ಯಾಗ್ರಹ', ಮತ್ತು 'ಹಿಂದೂಸ್ತಾನ್ ಕಿ ಕಸಮ್' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅಮಿತಾಬ್ ಮತ್ತು ಅಜಯ್ ಮತ್ತೆ ಒಟ್ಟಿಗೆ ಕೆಲಸ ಮಾಡಲು ಹೊರಟಿದ್ದಾರೆ. ಅಜಯ್ ದೇವ್‌ಗನ್ ಅವರು ಅಮಿತಾಬ್ ಬಚ್ಚನ್ ಅವರೊಂದಿಗೆ 'ಮೇಡೆ' ಚಿತ್ರವನ್ನು ನಿರ್ಮಿಸಲಿದ್ದಾರೆ.ಅಜಯ್ ದೇವ್‌ಗನ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ ‘ಕಾಕಿ ಹಾಗೂ ಸತ್ಯಾಗ್ರಹ’ ಸಿನಿಮಾದಲ್ಲಿ ಅಮಿತಾಬ್ ಹಾಗೂ ಅಜಯ್ ಒಟ್ಟಾಗಿ ನಟಿಸಿದ್ದರು. ಅಜಯ್ಸ್ ಪ್ರೊಡಕ್ಷನ್ ಕಂಪನಿ ಹಾಗೂ ಅಜಯ್ ದೇವಗನ್ ಫಿಲ್ಮ್ಸ್ ಸಿನಿಮಾಕ್ಕೆ ಹಣ ಹೂಡಿಕೆ ಮಾಡಲಿವೆ. ಮೂಲಗಳ ಪ್ರಕಾರ ಸಿನಿಮಾದ ಶೂಟಿಂಗ್ ಡಿಸೆಂಬರ್‌ಗೆ ಆರಂಭವಾಗಲಿದೆ. ಸದ್ಯ ಅಮಿತಾಭ್‌ ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಝಂಡ್‌, ಚೆಹ್ರೆ ಹಾಗೂ ಬ್ರಹ್ಮಾಸ್ತ್ರ ಸಿನಿಮಾಗಳು ಅಮಿತಾಬ್ ಕೈಯಲ್ಲಿವೆ.