ಡಿನ್ನರ್ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಕೊಹ್ಲಿ-ಅನುಷ್ಕಾ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಅವರ ಮುರಿದ ಸಂಬಂಧ ಮತ್ತೆ ಒಂದುಗೂಡುತ್ತಿದೆಯೇ? ಹೌದು ಎನ್ನುತ್ತಿವೆ ಬಾಲಿವುಡ್ ಮೂಲಗಳು... ಮುಂಬೈ: ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಅವರ ಮುರಿದ ಸಂಬಂಧ ಮತ್ತೆ ಒಂದುಗೂಡುತ್ತಿದೆಯೇ? ಹೌದು ಎನ್ನುತ್ತಿವೆ ಬಾಲಿವುಡ್ ಮೂಲಗಳು. ವೃತ್ತಿಪರ ಜೀವನದಲ್ಲಿ ಏಳ್ಗೆ ಕಾಣುವ ನಿಟ್ಟಿನಸ್ಸಿ ಪರಸ್ಪರ ಬೇರೆ ಬೇರೆಯಾಗಿದ್ದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಮತ್ತೆ ಒಂದಾಗುವತ್ತ ಹೆಜ್ಜೆ ಇಟ್ಟಿದೆಯಂತೆ. ಇದಕ್ಕೆ ಪೂರಕವೆಂಬಂತೆ ನಿನ್ನೆ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಒಟ್ಟಿಗೇ ಡಿನ್ನರ್ ಪಾರ್ಟಿಯಲ್ಲಿ ಕಾಣಿಸಿಕೊಂಡ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಛಾಯಾಗ್ರಾಹಕ ಯೋಗೇನ್ ಶಾ ಎನ್ನುವವರು ಈ ಚಿತ್ರವನ್ನು ಕ್ಲಿಕ್ಕಿಸಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಯೋಗೇನ್ ಶಾ, ಜೋಡಿ ಹಕ್ಕಿಗಳು ಮತ್ತೆ ಒಂದಾಗಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ. . . . ? . .