ನಾನು ರಾಹುಲ್‌ ಗಾಂಧಿಯನ್ನು ಮದುವೆಯಾಗಲು ಸಿದ್ಧಳಿದ್ದೇನೆ ಆದರೆ ಒಂದು ಕಂಡೀಷನ್: ಶೆರ್ಲಿನ್‌ ಛೋಪ್ರಾ ಹೇಳಿಕೆ ವೈರಲ್ ನಾನು ರಾಹುಲ್‌ ಗಾಂಧಿಯವರನ್ನು ಮದುವೆಯಾಗಲು ಸಿದ್ಧಳಿದ್ದೇನೆ ಎಂದು ಬಾಲಿವುಡ್‌ ನಟಿ ಶೆರ್ಲಿನ್‌ ಛೋಪ್ರಾ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ. ಮುಂಬಯಿ: ನಾನು ರಾಹುಲ್‌ ಗಾಂಧಿಯವರನ್ನು ಮದುವೆಯಾಗಲು ಸಿದ್ಧಳಿದ್ದೇನೆ ಎಂದು ಬಾಲಿವುಡ್‌ ನಟಿ ಶೆರ್ಲಿನ್‌ ಛೋಪ್ರಾ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.ಮುಂಬೈನ ಬಾಂದ್ರಾ ಬ್ಯಾಂಡ್‌ ಸ್ಟಾಂಡ್‌ ಬೀಚ್‌ಗೆ ಇತ್ತೀಚಿಗೆ ಶೆರ್ಲಿನ್‌ ಛೋಪ್ರ ತೆರಳಿದ್ದರು. ಈ ವೇಳೆ ಪತ್ರಕರ್ತರು ಅವರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಮದುವೆಯಾಗಲು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ ರದ್ದು: ಸಂಸತ್‌ನಲ್ಲಿ ಮತ್ತೆ ಪ್ರತಿಧ್ವನಿಸಲಿದೆ ಜನಪರ ಧ್ವನಿ ಎಂದ ಪ್ರಿಯಾಂಕಾ ವಾದ್ರಾಅದಕ್ಕೆ ಉತ್ತರಿಸಿದ ನಟಿ ‘ನಾನು ರಾಹುಲ್‌ ಗಾಂಧಿಯವರನ್ನು ಮದುವೆಯಾಗಲು ಸಿದ್ಧಳಿದ್ದೇನೆ’ ಆದರೆ ಒಂದು ಖಂಡಿಷನ್ ಇದೆ ಎಂದಿದ್ದಾರೆ. ಮದುವೆಯಾದರೆ ತಮ್ಮ ಕುಲನಾಮ ಛೋಪ್ರಾ ಎಂದು ಹಾಕಲು ಸಮ್ಮತಿಸಬೇಕು ಎಂದು ಹೇಳಿದ್ದಾರೆ. ಛೋಪ್ರಾ ಎಂಬ ಕುಲನಾಮ ಮುಂದುವರಿಯಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.