ವೈವಾಹಿಕ ಜೀವನಕ್ಕೆ ಕಾಲಿಡದೇ ಅಪ್ಪನಾದ ತುಷಾರ್ ಕಪೂರ್! ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನವೇ ಬಾಲಿವುಡ್ ನಟ ತುಷಾರ್ ಕಪೂರ್ ಅಪ್ಪನಾಗಿ ಸಂಭ್ರಮಿಸುತ್ತಿದ್ದಾರೆ. ಬಾಲಿವುಡ್ ನಟ ತುಷಾರ್ ಕಪೂರ್ ಅವರಿಗೆ ಲಕ್ಷ್ಯಾ ಎಂಬ ... ಮುಂಬೈ: ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನವೇ ಬಾಲಿವುಡ್ ನಟ ತುಷಾರ್ ಕಪೂರ್ ಅಪ್ಪನಾಗಿ ಸಂಭ್ರಮಿಸುತ್ತಿದ್ದಾರೆ. ಬಾಲಿವುಡ್ ನಟ ತುಷಾರ್ ಕಪೂರ್ ಅವರಿಗೆ ಲಕ್ಷ್ಯಾ ಎಂಬ ಗಂಡು ಮಗು ಜನಿಸಿದೆ. ವಿವಾಹವಾಗದೆ ತಂದೆಯಾಗಬೇಕೆನ್ನುವುದು ತುಷಾರ್ ಬಯಕೆಯಾಗಿತ್ತು. ಐವಿಎಫ್ ಚಿಕಿತ್ಸೆ ಇದಕ್ಕೆ ಸಹಾಯ ಮಾಡಿದೆ. ಬಾಡಿಗೆ ತಾಯಿ ಮೂಲಕ ತುಷಾರ್ ತಂದೆಯಾಗಿದ್ದಾರೆ. ಜೀತೆಂದ್ರ – ಶೋಭಾ ಕಪೂರ್ ದಂಪತಿ ಪುತ್ರ ತುಷಾರ್ ಗಂಡು ಮಗುವಿಗೆ ತಂದೆಯಾಗಿದ್ದಾನೆ. ನಾನು ತಂದೆ ಆಗಿರುವುದು ಅತೀವ ಸಂತಸ ನೀಡಿದೆ. ನನ್ನ ಹಲವು ಭಾವನೆಗಳನ್ನು ಲಕ್ಷ್ಯನೊಂದಿಗೆ ಹಂಚಿಕೊಳ್ಳಲು ಕಾತರನಾಗಿರುವೆ. ತಂದೆ ಹಾಗೂ ತಾಯಿಯ ಪ್ರೀತಿಯನ್ನು ನಾನೇ ತುಂಬುವೆ ಎಂದು ತಿಳಿಸಿದ್ದಾರೆ. ತುಷಾರ್ ತಂದೆ ಹಾಗೂ ಬಾಲಿವುಡ್ ಹಿರಿಯ ನಟ ಜೀತೆಂದ್ರ ಹಾಗೂ ಶೋಭಾ ಕಪೂರ್ ದಂಪತಿಗೆ ಲಕ್ಷ್ಯ ಮೊದಲ ಮೊಮ್ಮಗನಾಗಿದ್ದಾನೆ. ನನ್ನ ಮಗನ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ತುಷಾರ್ ನಮಗೆ ಅದ್ಭುತ ಮಗ. ಅದೇ ರೀತಿ ಲಕ್ಷ್ಯಗೂ ಒಳ್ಳೆಯ ತಂದೆಯಾಗಲಿ. ಲಕ್ಷ್ಯ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಅಜ್ಜನಾಗಿರುವ ಜೀತೆಂದ್ರ ಶುಭ ಕೋರಿದ್ದಾರೆ.