ಖ್ಯಾತ ಗಾಯಕ ಕುಮಾರ್ ಸಾನುಗೆ ಕೊರೋನಾ ಸೋಂಕು ಪ್ರಖ್ಯಾತ ಹಿನ್ನೆಲೆ ಗಾಯಕ ಕುಮಾರ್ ಸಾನು ಅವರಿಗೆ ಕೊರೋನಾ ಸೋಂಕು ದೃಢವಾಗಿದೆ. ಈ ಬಗ್ಗೆ 62 ವರ್ಷದ ಗಾಯಕನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ. ಪ್ರಖ್ಯಾತ ಹಿನ್ನೆಲೆ ಗಾಯಕ ಕುಮಾರ್ ಸಾನು ಅವರಿಗೆ ಕೊರೋನಾ ಸೋಂಕು ದೃಢವಾಗಿದೆ. ಈ ಬಗ್ಗೆ 62 ವರ್ಷದ ಗಾಯಕನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ."ದುರದೃಷ್ಟವಶಾತ್ ಸಾನು ದಾ ಅವರು ಕೊರೋನಾ ಸೋಂಕಿಗೆ ಧನಾತ್ಮಕ ವರದಿ ಪಡೆದಿದ್ದಾರೆ. ದಯವಿಟ್ಟು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ. ಧನ್ಯವಾದಗಳು" ಸಾನು ಅವರ ಹಿನ್ನೆಲೆ ಸಂಗೀತದ ಟೀಂ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದೆ.ಈ ಪ್ರಕಟಣೆ ಗಾಯಕನ ಅಭಿಮಾನಿಗಳಿಗೆ ಆತಂಕಕ್ಕೆ ಕಾರಣವಾಗಿದ್ದು ಅನೇಕರು ಗಾಯಕ ಸಾನು ಅವರ ಶೀಘ್ರ ಚೇತರಿಕೆಗಾಗಿ ಹಾರೈಸಿ ಕಮೆಂಟ್ ಮಾಡಿದ್ದಾರೆ.