ಪೂನಂ ಸಾವಿಗೆ ಗರ್ಭಕಂಠದ ಕ್ಯಾನ್ಸರ್‌ ಕಾರಣವಲ್ಲ: ಆಪ್ತ ಮೂಲಗಳು ಹೇಳೋದೇನು; ಸಾವಿನ ಸುತ್ತ ಅನುಮಾನದ ಹುತ್ತ! ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟ ಪೂನಂ ಪಾಂಡೆ ಸಾವಿನ ಸುತ್ತ ಅನುಮಾನದ ಹುತ್ತ ದಟ್ಟವಾಗಿ ಬೆಳೆಯಲು ಆರಂಭವಾಗಿದೆ. ಮುಂಬಯಿ: ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟ ಪೂನಂ ಪಾಂಡೆ ಸಾವಿನ ಸುತ್ತ ಅನುಮಾನದ ಹುತ್ತ ದಟ್ಟವಾಗಿ ಬೆಳೆಯಲು ಆರಂಭವಾಗಿದೆ.ನಟಿಯ ನಿಧನ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾದ ಬಳಿಕ ಇಲ್ಲಿಯವರೆಗೆ ಪೂನಂ ಪಾಂಡೆಯವರ ಯಾವುದೇ ಫೋಟೋ ಲಭ್ಯವಾಗಿಲ್ಲ. ಪೂನಂ ಪಾಂಡೆ ಅವರ ಮ್ಯಾನೇಜರ್‌ ಅವರನ್ನು ಕೇಳಿದರೆ ನಮಗೆ ಅವರ ಸಹೋದರಿ ಅವರಿಂದ ನಿಧನರಾದ ಸುದ್ದಿ ತಿಳಿದಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಖಚಿತ ಪಡಿಸಲು ಸಹೋದರಿ ಅವರಿಗೆ ಕರೆ ಮಾಡಿದರೆ ಅವರ ಮೊಬೈಲ್‌ ಸಂಖ್ಯೆ ಸ್ವಿಚ್‌ ಆಫ್‌ ಆಗಿದೆ.ಪೂನಂ ಪಾಂಡೆ ಗರ್ಭಕಂಠ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ ಅನ್ನೋ ಸುದ್ದಿ ಆಘಾತ ತಂದಿತ್ತು. ಆದರೆ ಗರ್ಭಕಂಠ ಕ್ಯಾನ್ಸರ್‌ನಿಂದ ದೀಢೀರ್ ಸಾವು ಸಂಭವಿಸುವುದಿಲ್ಲ ಅನ್ನೋ ತಜ್ಞ ವೈದ್ಯರ ಮಾತುಗಳ ಬೆನ್ನಲ್ಲೇ ಪೂನಂ ಪಾಂಡೆ ಸಾವಿನ ಸುತ್ತ ಅನುಮಾನಗಳು ಮೂಡಿಸಿದೆ. ಪೂನಂ ಪಾಂಡೆ ಜೀವಂತ ವಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಆದರೆ ಕೆಲ ವರದಿಗಳ ಪ್ರಕಾರ, ಪೂನಂ ಪಾಂಡೆ ಮೃತಪಟ್ಟಿರುವುದು ನಿಜ. ಆದರೆ ಗರ್ಭಕಂಠ ಕ್ಯಾನ್ಸರ್‌ನಿಂದ ಅಲ್ಲ, ಓವರ್ ಡೋಸ್ ಔಷಧಿಯಿಂದ ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳುತ್ತಿದೆ.ಇದನ್ನೂ ಓದಿ: ನಟಿ ಪೂನಂ ಪಾಂಡೆ ನಿಧನ: 32 ವರ್ಷಕ್ಕೆ ಇಹಲೋಕ ತ್ಯಜಿಸಿದ ಕಾಂಟ್ರವರ್ಸಿ ಕ್ವೀನ್!ಚಿಕಿತ್ಸೆ ವೇಳೆ ನೀಡಿದ ಔಷದಿ ಓವರ್ ಡೋಸ್‌ನಿಂದ ಪೂನಂ ಪಾಂಡೆ ಮೃತಪಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಮಾಹಿತಿಗಳು ಅಧಿಕೃತವಾಗಿಲ್ಲ. ಯಾವ ಔಷಧಿ, ಯಾವ ಚಿಕಿತ್ಸೆ ಪಡೆಯುತ್ತಿದ್ದರೂ, ಪೂನಂ ಗರ್ಭಕಂಠ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದರೇ? ಅನ್ನೋದು ದೃಢಪಟ್ಟಿಲ್ಲ. ಡ್ರಗ್ಸ್ ಓವರ್ ಡೋಸ್ ನಿಂದ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಟೈಮ್ಸ್ ನೌ ಪತ್ರಿಕೆ ವರದಿ ಮಾಡಿದೆ.