ಕಮಲ್‍ನ ಮೇಕಪ್ ಕಮಾಲ್! ಚಿತ್ರರಂಗದಲ್ಲಿ ಮೇಕಪ್‍ಗೆಂದೇ ಪರಿಣತರಿರುತ್ತಾರೆ. ಖ್ಯಾತ, ಹೆಸರಾಂತ ನಟರಿಗೆ ಖಾಸಗಿ... ಚಿತ್ರರಂಗದಲ್ಲಿ ಮೇಕಪ್‍ಗೆಂದೇ ಪರಿಣತರಿರುತ್ತಾರೆ. ಖ್ಯಾತ, ಹೆಸರಾಂತ ನಟರಿಗೆ ಖಾಸಗಿ ಮೇಕಪ್ ಮ್ಯಾನ್‍ಗಳಿರುತ್ತಾರೆ. ಆದರೆ ಇಲ್ಲಿ ಖ್ಯಾತ ನಟರೊಬ್ಬರು, ಇನ್ನೊಬ್ಬ ಖ್ಯಾತ ನಟರಿಗೆ ಮೇಕಪ್ ಮಾಡಿದ್ದು ವಿಶೇಷ. ಹೌದು, ತಮಿಳು ಚಿತ್ರರಂಗದ ಖ್ಯಾತ ನಟ ಕಮಲಹಾಸನ್ `ಥೂಂಗವನಮ್' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಆ ಚಿತ್ರದಲ್ಲಿ ತ್ರಿಶಾ, ಪ್ರಕಾಶ್ ರೈ, ಕಿಶೋರ್ ಹಾಗೂ ಮನೀಷಾ ಕೊಯಿರಾಲ ಸೇರಿದಂತೆ ಹೊಸ ಪ್ರತಿಭೆಗಳು, ಖ್ಯಾತ ನಟ-ನಟಿಯರು ಕಾಣಿಸಿ ಕೊಳ್ಳುತ್ತಿದ್ದಾರೆ. ಈಗ ವಿಷಯ ಅದಲ್ಲ, ಸ್ವತಃ ಕಮಲ್‍ಹಾಸನ್ ಅವರೇ ಪ್ರಕಾಶ್ ರೈ ಮತ್ತು ನಟಿ ತ್ರಿಶಾ ಅವರಿಗೆ ಮೇಕಪ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ! ಕಮಲಹಾಸನ್ ಅವರು ಸೆಟ್ ನಲ್ಲೇ ಈ ಇಬ್ಬರು ನಟ, ನಟಿಗೆ ಮೇಕಪ್ ಮಾಡುವ ಮೂಲಕ ಮತ್ತಷ್ಟು ಪ್ರೀತಿಗೆ ಪಾತ್ರರಾಗಿದ್ದಾರೆ. `ಚಿತ್ರರಂಗದ ಖ್ಯಾತ ನಟರೊಬ್ಬರ ಜತೆ ನಟಿಸುತ್ತಿರುವುದೇ ಒಂದು ಖುಷಿ. ಇನ್ನು ಅವರ ಕೈಯಾರೇ ಮೇಕಪ್ ಮಾಡಿಸಿಕೊಳ್ಳುವುದು ಮತ್ತಷ್ಟು ಖುಷಿ ಕೊಡುವ ವಿಷಯ' ಎಂದು ಪ್ರಕಾಶ್ ರೈ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ತ್ರಿಶಾ ಕೂಡ `ಇಂತಹ ಅಪರೂಪದ ನಟರು ನಮಗೆ ಮೇಕಪ್ ಮಾಡಿರುವುದು ಖುಷಿ ಕೊಟ್ಟಿದೆ' ಎಂದು ಹೇಳಿಕೊಂಡಿದ್ದಾರೆ.