ಸಲ್ಮಾನ್ ಖಾನ್ ಗೆ ಅಮೀರ್ ಖಾನ್ ಪ್ರಶಂಸೆ ಭಜರಂಗಿ ಬಾಯಿಜಾನ್ ಚಿತ್ರ ನೋಡಿರೋ ಅಮಿರ್ ಖಾನ್ ನಟ ಸಲ್ಮಾನ್ ಖಾನ್ ಮತ್ತು ನಿರ್ದೇಶಕ ಕಬೀರ್ ಖಾನ್... ಭಜರಂಗಿ ಬಾಯಿಜಾನ್ ಚಿತ್ರ ನೋಡಿರೋ ಅಮಿರ್ ಖಾನ್ ನಟ ಸಲ್ಮಾನ್ ಖಾನ್ ಮತ್ತು ನಿರ್ದೇಶಕ ಕಬೀರ್ ಖಾನ್ ಅವರನ್ನು ಗುಣಗಾನ ಮಾಡಿದ್ದಾರೆ. ಇಲ್ಲಿಯವರೆಗಿನ ಸಲ್ಮಾನ್ ಚಿತ್ರಗಳಲ್ಲಿ ಭಜರಂಗಿ ಅತ್ಯುತ್ತಮ ಚಿತ್ರ ಎಂದು ಹೇಳಿರುವ ಅಮಿರ್ ಖಾನ್, ಅಂದಿನಿಂದ ಇಲ್ಲಿಯವರೆಗೇ ಸಲ್ಮಾನ್ ಅತ್ಯುತ್ತಮವಾಗಿ ನಟಿಸುತ್ತ ಬಂದಿದ್ದಾರೆ. "ಅದ್ಭುತ ಕಥೆ, ಅಮೋಘ ಚಿತ್ರಕಥೆ, ಹೃದಯ ತಟ್ಟುವಂತ ಸಂಭಾಷಣೆ, ಉತ್ತಮ ಬರವಣಿಗೆಯಿಂದ ಈ ಚಿತ್ರ ಕೂಡಿದ್ದು, ಸಲ್ಮಾನ್ ಖಾನ್ ಜೊತೆಗೆ, ಆ ಪುಟ್ಟ ಹುಡುಗಿ ಹರ್ಷಾಲಿ ಮಲ್ಹೋತ್ರಾ ನಟನೆ ಬಹಳ ಇಷ್ಟವಾಗಿದೆ. ಭಜರಂಗಿ ಬಾಯಿಜಾನ್ ಚಿತ್ರ ಬಿಡುಗಡೆಯಾದ ಎರಡು ದಿನಗಳಲ್ಲಿ ರು. 63.75 ಗಳಿಕೆ ಮಾಡಿದೆ ಎಂದು ಅಮಿರ್ ಖಾನ್ ಟ್ವೀಟ್ ಮಾಡಿದ್ದಾರೆ.