ಜಾಗತಿಕವಾಗಿ ೧೦೦ ಕೋಟಿ ಗಳಿಕೆ ಕಂಡ 'ಬಾಜಿರಾವ್ ಮಸ್ತಾನಿ' ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಐತಿಹಾಸಿಕ ಡ್ರಾಮ 'ಬಾಜಿರಾವ್ ಮಸ್ತಾನಿ' ೧೦೦ ಕೋಟಿ ಗಳಿಕೆಯನ್ನು ಸೋಮವಾರಕ್ಕೆ ದಾಟಿದೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮುಂಬೈ: ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಐತಿಹಾಸಿಕ ಡ್ರಾಮ 'ಬಾಜಿರಾವ್ ಮಸ್ತಾನಿ' ೧೦೦ ಕೋಟಿ ಗಳಿಕೆಯನ್ನು ಸೋಮವಾರಕ್ಕೆ ದಾಟಿದೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಮುಖ್ಯ ಪಾತ್ರಗಳಲ್ಲಿರುವ ಈ ಸಿನೆಮಾ ವಿಶ್ವದಾದ್ಯಂತ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಮರಾಠಾ ರಾಜ ಪೇಶ್ವಾ ಬಾಜಿರಾವ್ ೧, ಮಸ್ತಾನಿ ಮತ್ತು ಕಾಶೀಭಾಯಿ ಇವರುಗಳ ಕಥೆ ಒಳಗೊಂಡ ಸಿನೆಮಾ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಅವರ 'ದಿವ್ಲಾಲೆ'ಯೊಂದಿಗೆ ಡಿಸೆಂಬರ್ ೧೮ ರಂದು ಬಿಡುಗಡೆಯಾಗಿತ್ತು. 'ಬಾಜಿರಾವ್ ಮಸ್ತಾನಿ' ಮೊದಲ ವಾರಾಂತ್ಯ ೯೦.೮೦ ಕೋಟಿ (ಭಾರತದಲ್ಲಿ ೬೦.೮೦ ಕೋಟಿ ಮತ್ತು ವಿದೇಶದಲ್ಲಿ ೩೦ ಕೋಟಿ) ಗಳಿಸಿದೆ. ಸೋಮವಾರಕ್ಕೆ 10.25 ಕೋಟಿ ಗಳಿಸುವ ಮೂಲಕ ೧೦೦ ಕೋಟಿ ರೇಖೆ ದಾಟಿದೆ. ವಿಶೇಷವೆಂದರೆ ಸೋಮವಾರದ ಗಳಿಕೆಯಲ್ಲಿ 'ಬಾಜಿರಾವ್ ಮಸ್ತಾನಿ' ರೋಹಿತ್ ಶೆಟ್ಟಿ ನಿರ್ದೇಶನದ 'ದಿಲ್ವಾಲೆ'ಯನ್ನು ಹಿಂದಿಕ್ಕಿದೆ. 'ದಿಲ್ವಾಲೆ' ಬಿಡುಗಡೆಯಾದ ವಾರಾಂತ್ಯವೇ ೧೦೦ ಕೋಟಿ ಗಳಿಕೆ ಕಂಡಿತ್ತು.