ನೆಕ್ಸ್ಟ್ ರಾಖಿ ಸಾವಂತ್; ಕಂಗನಾ ರಾಜಕೀಯ ಪ್ರವೇಶದ ಬಗ್ಗೆ ಸಂಸದೆ ಹೇಮಮಾಲಿನಿ ಹೀಗೆ ಹೇಳಿದ್ದೇಕೆ? ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ತಾವು ಪ್ರತಿನಿಧಿಸುವ ಕ್ಷೇತ್ರವಾದ ಮಥುರಾದಿಂದ ನಟಿ ಕಂಗನಾ ರಣಾವತ್ ಅವರ ರಾಜಕೀಯ ಎಂಟ್ರಿ ವದಂತಿಯ ಬಗ್ಗೆ ಪ್ರಶ್ನಿಸಿದಾಗ ನಟಿ ಅನಿರೀಕ್ಷಿತ ಪ್ರತಿಕ್ರಿಯೆ ನೀಡಿದ್ದಾರೆ. ಮಥುರಾ: ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ತಾವು ಪ್ರತಿನಿಧಿಸುವ ಕ್ಷೇತ್ರವಾದ ಮಥುರಾದಿಂದ ನಟಿ ಕಂಗನಾ ರಣಾವತ್ ಅವರ ರಾಜಕೀಯ ಎಂಟ್ರಿ ವದಂತಿಯ ಬಗ್ಗೆ ಪ್ರಶ್ನಿಸಿದಾಗ ನಟಿ ಅನಿರೀಕ್ಷಿತ ಪ್ರತಿಕ್ರಿಯೆ ನೀಡಿದ್ದಾರೆ.ಬಹುಶಃ ಮಥುರಾದಿಂದ ಕಂಗನಾ ರಣಾವತ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಕೇಳಲಾಯಿತು. ಇದಕ್ಕೆ ನಟಿ ನನಗೇನು ಗೊತ್ತು. 'ಇದು ದೇವರಿಗೆ ಬಿಟ್ಟದ್ದು, ಶ್ರೀಕೃಷ್ಣ ಬಯಸಿದ್ದನ್ನು ಮಾಡುತ್ತಾನೆ" ಎಂದು ಹೇಳಿದರು.# | , : , , ", ... . , ." ../wgQsDzbn5Z'ಮಥುರಾದಿಂದ ಬರೀ ಸಿನಿಮಾ ನಟಿಯರೇ ಆಯ್ಕೆಯಾಗಬೇಕಾ, ನಿಮ್ಮ ತಲೆಯಲ್ಲಿ ಸಿನಿಮಾ ನಟಿಯರು ಮಾತ್ರ ಚುನಾವಣೆಗೆ ಸ್ಪರ್ಧಿಸಬೇಕು ಅಂತಿದಿಯಾ? ನಾಳೆ ರಾಖಿ ಸಾವಂತ್ ಕೂಡ ಚುನಾವಣೆಗೆ ಸ್ಪರ್ಧಿಸುತ್ತಾರೆ ಬಿಡಿ ಎಂದು ಹೇಳಿದರು.ಇದನ್ನೂ ಓದಿ: 'ಎಮರ್ಜೆನ್ಸಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ: ಕಂಗನಾ, ಇಂದಿರಾ ಗಾಂಧಿ ತದ್ರೂಪಿಯೇ ಎಂದ ಅಭಿಮಾನಿಗಳು!ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದಕ್ಕೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. 'ಓಹ್ ಸ್ವತಃ ನಟಿ, ಮತ್ತು ಅವರ ಪತಿ ಮತ್ತು ಮಗ(ಅವರು) ರಾಜಕೀಯದಲ್ಲಿದ್ದಾರೆ. ಇನ್ನು ಈ ನಟಿಗೆ ಬೇರೆ ಸಿನಿಮಾ ನಟಿಯರು ರಾಜಕೀಯಕ್ಕೆ ಬರಲು ಸಮಸ್ಯೆ ಇದೆಯೇ?" ಎಂದು ಪ್ರಶ್ನಿಸಿದ್ದಾರೆ. , , ? 10 ?ನಟಿ ಕಂಗನಾ ರಣಾವತ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇತ್ತೀಚಿನ ಯಾವುದೇ ಸೂಚನೆಗಳಿಲ್ಲದಿದ್ದರೂ, ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಥುರಾಗೆ ಬಂದಿದ್ದಾಗ ತಾವು ಯಾವುದೇ ಪಕ್ಷಕ್ಕೆ ಸೇರದಿದ್ದರೂ, 'ರಾಷ್ಟ್ರೀಯವಾದಿಗಳ ಪರವಾಗಿ ಪ್ರಚಾರ ಮಾಡುವುದಾಗಿ' ಹೇಳಿದ್ದರು.