'ಬಾಜಿರಾವ್ ಮಸ್ತಾನಿ'ಯ 'ಗಜಾನನ' ಹಾಡು ಅರ್ಪಣೆ ಮಾಡಲಿರುವ ದೀಪಿಕಾ, ರಣವೀರ್ ಗುರುವಾರ ಆಚರಿಸಲಾಗುವ ಗಣೇಶ ಚತುರ್ಥಿಗೂ ಮುನ್ನ ಬಾಲಿವುಡ್ ನಟರಾದ ರಣವೀರ್ ಸಿಂಗ್ ಮತ್ತಿ ದೀಪಿಕಾ ಪಡುಕೋಣೆ ತಮ್ಮ ಮುಂಬರಲಿರುವ ಚಿತ್ರ 'ಬಾಜಿರಾವ್ ಮಸ್ತಾನಿ'ಯ ಮುಂಬೈ: ಗುರುವಾರ ಆಚರಿಸಲಾಗುವ ಗಣೇಶ ಚತುರ್ಥಿಗೂ ಮುನ್ನ ಬಾಲಿವುಡ್ ನಟರಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಮುಂಬರಲಿರುವ ಚಿತ್ರ 'ಬಾಜಿರಾವ್ ಮಸ್ತಾನಿ'ಯ ಗಣಪತಿಗೆ ಅರ್ಪಿಸಲಾಗಿರುವ 'ಗಜಾನನ' ಹಾಡನ್ನು ಬಿಡುಗಡೆ ಮಾಡಲಿದ್ದಾರೆ. "ಶಕ್ತಿಯುತ 'ಗಜಾನನ' ಆರತಿ ಯನ್ನು ನಾಳೆ ಬಿಡುಗಡೆ ಮಾಡಲಿದ್ದೇವೆ! #ಬಾಜಿರಾವ್ ಮಸ್ತಾನಿ" ಎಂದು ರಣವೀರ್ ಸಿಂಗ್ ಸೋಮವಾರ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಗಣಪತಿಯ ವಿಗ್ರಹದ ಜೊತೆ ಫೋಟೋ ಹಾಕಿಕೊಂಡಿರುವ ಅವರು, "ಗಿನ್ನಿಸ್ ದಾಖಲೆ ಸಂಖ್ಯೆಯ ಜನರು ಗಣಪತಿಯ ಚಿತ್ರವನ್ನು ಮಾನವ ಸರಪಳಿ ಮೂಲಕ ಮಾಡಿರುವುದನ್ನು ಕಣ್ಣಾರೆ ನೋಡಿ" ಎಂದು ಕೂಡ ಬರೆದುಕೊಂಡಿದ್ದಾರೆ. ಈ ಬಿಡುಗಡೆಯಲ್ಲಿ ರಣವೀರ್ ಮತ್ತು ದೀಪಿಕಾ 'ಮಹಾ ಆರತಿ' ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮ ಮಂಗಳವಾರ ಪುಣೆಯ, ಬಾಲೇವಾಡಿಯ ಛತ್ರಪತಿ ಶಿವಾಜಿ ಕ್ರೀಡಾ ಸಭಾಂಗಣದಲ್ಲಿ ನಡೆಯಲಿದೆ. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಈ ಐತಿಹಾಕಿಕ ಕಥಾಹಂದರವುಳ್ಳ ಸಿನೆಮಾದಲ್ಲಿ ರಣವೀರ್ ಸಿಂಗ್ ೧೮ ನೆ ಶತಮಾನದ ಮಾರಾಠಾ ರಾಜ ಪೇಶ್ವಾ ಬಾಜಿರಾವ್ ೧ ರ ಪಾತ್ರ ಹಾಕಿದ್ದರೆ ಅವನ ಪ್ರೇಯಸಿ ಮಸ್ತಾನಿ ಪಾತ್ರವನ್ನು ದೀಪಿಕಾ ನಿರ್ವಹಿಸಿದ್ದಾರೆ. ಅವನ ಮೊದಲ ಪತ್ನಿ ಕಾಶೀಭಾಯಿ ಪಾತ್ರವನ್ನು ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಪ್ರಿಯಾಂಕ ಛೋಪ್ರಾ ನಿರ್ವಹಿಸಿದ್ದಾರೆ. ಸಿನೆಮಾ ಡಿಸೆಂಬರ್ ೧೮ ರಂದು ಬಿಡುಗಡೆಯಾಗಲಿದೆ.