25 ವರ್ಷಗಳ ನಂತರ ಮೊದಲ ಬಾರಿಗೆ ಸೆಲ್ಫಿಗೆ ಪೋಸ್ ನೀಡಿದ ಖಾನ್ ದ್ವಯರು! ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಮತ್ತು ಮಿ. ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಸತತ ಎರಡು ದಶಕಗಳ ನಂತರ ಮೊದಲ ಬಾರಿಗೆ ಜೊತೆಯಾಗಿ ಕ್ಯಾಮೆರಾಗೆ ... ನವದೆಹಲಿ: ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಮತ್ತು ಮಿ. ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಸತತ ಎರಡು ದಶಕಗಳ ನಂತರ ಮೊದಲ ಬಾರಿಗೆ ಜೊತೆಯಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಅಮೀರ್ ಖಾನ್ ಅವರ ಜೊತೆಗಿನ ಕೂಲ್ ಸೆಲ್ಫೀಯನ್ನು ಶಾರೂಖ್ ಖಾನ್ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಶಾರೂಖ್ ಖಾನ್ ಅವರ ಈ ಪೋಸ್ಟ್ ಗೆ ಈಗಾಗಲೇ 25 ಸಾವಿರ ಲೈಕ್ ಗಳು ಬಂದಿವೆ. ಪ್ರತಿಬಾರಿ ಭೇಟಿಯಾದಾಗಲೂ ಶಾರೂಖ್ ಮತ್ತು ಸಲ್ಮಾನ್ ಒಟ್ಟಿಗೆ ಫೋಟೋ ಕ್ಲಿಕ್ ಮಾಡುತ್ತಿದ್ದರು. ಆದರೆ ಈ ಬಾರಿ ವಿಶೇಷ ಎನ್ನುವಂತೆ ಶಾರೂಖ್ ಮತ್ತು ಅಮೀರ್ ಜೊತೆಯಾಗಿ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾರೆ. 25 ವರ್ಷಗಳಿಂದ ನಮ್ಮಿಬ್ಬರ ಪರಿಚಯವಿದೆ, ಆದರ ಈ ಫೋಟೋ ನಾವಿಬ್ಬರು ಒಟ್ಟಾಗಿ ನಮಗಾಗಿ ತೆಗೆದುಕೊಂಡದ್ದಾಗಿದೆ ಎಂದು ಶಾರೂಖ್ ಟ್ವೀಟ್ ಮಾಡಿದ್ದಾರೆ. ಅಜಯ್ ಬಿಜಿ ಹುಟ್ಟು ಹಬ್ಬ ಸಮಾರಂಭದಲ್ಲಿ ಸೇರಿದ್ದ ಈ ಇಬ್ಬರು ಅಲ್ಲಿಯೇ ಫೋಟೋ ಕ್ಲಿಕ್ಕಿಸಿಕೊಂಡಿದ್ದರು ಎಂದು ವರದಿಯಾಗಿದೆ. 25 . . ../7aYKOFll1a