ಶಾರುಖ್ ಹಾಡುಗಳಿದ್ದರೆ ನನಗೆ ಮನೋವೈದ್ಯರ ಅಗತ್ಯವಿಲ್ಲ -ಆಲಿಯಾ ಭಟ್ ನಾನೆಲ್ಲಾದ್ರೂ ಡಿಫ್ರೆಶನ್ ಗೆ ಹೋದರೆ ನನಗೆ ಮನೋವೈದ್ಯರ ಅಗತ್ಯವಿಲ್ಲ. ಶಾರುಖ್ ಹಾಡುಗಳೇ ನನ್ನನ್ನು ಸರಿ ಪಡಿಸುತ್ತವೆ ಅಂತಾ ಆಲಿಯಾ ಹೇಳಿದ್ದಾರೆ... ಚಿಕ್ಕ ವಯಸ್ಸಿನಲ್ಲೇ ಬಾಲಿವುಡ್ ನಲ್ಲಿ ಭರವಸೆ ಮೂಡಿಸಿದ ನಟಿಯರಲ್ಲಿ ಒಬ್ಬರು ಆಲಿಯಾ ಭಟ್. 2016 ಅಂತೂ ಆಲಿಯಾ ಪಾಲಿಗೆ ಗೋಲ್ಡನ್ ಇಯರ್. ಅದಕ್ಕೆ ಕಾರಣ ಕೂಡ ಇದೇ. ಅದೇನಪ್ಪಾ ಅಂದ್ರೆ ಎರಡು ಬಿಗ್ ಸಿನಿಮಾಗಳಲ್ಲಿ ಆಲಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಶಾರುಖ್ ಹಾಗೂ ರಣ್ ಬೀರ್ ಕಪೂರ್ ಜೊತೆ ಆಲಿಯಾ ಭಟ್ ಅಭಿನಯಿಸುತ್ತಿದ್ದಾರೆ. ಶಾರುಖ್ ಜೊತೆ ಅಭಿನಯಿಸಲು ಅವಕಾಶ ಸಿಕ್ಕಿರೋದಕ್ಕೆ ಆಲಿಯಾ ಫುಲ್ ಖುಷಿ ಯಾಗಿದ್ದಾರೆ. ಬಾಲ್ಯದಿಂದಲೇ ಆಲಿಯಾಗೆ ಶಾರುಖ್ ಖಾನ್ ಅಂದ್ರೆ ತುಂಬಾನೇ ಇಷ್ಟವಂತೆ. ಚಿಕ್ಕ ಮಗುವಾಗಿದ್ದಾಗಲೇ ಆಲಿಯಾ ಶಾರುಖ್ ಅವರ ಕುಛ್ ಕುಛ್ ಹೋತಾ ಹೈ, ಕೋಯಿ ಮಿಲ್ ಗಯಾ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದರಂತೆ. ಇನ್ನು ಈಗಲೂ ತನಗೆ ಬೇಜಾರಾದಾಗ ನಾನು ಶಾರುಖ್ ಅವರ ಹಾಡುಗಳನ್ನೇ ಕೇಳುತ್ತೇನೆ. ಅದು ನನ್ನ ಮನಸ್ಸಿಗೆ ತುಂಬಾನೇ ಆನಂದ ನೀಡುತ್ತೆ. ನಾನೆಲ್ಲಾದ್ರೂ ಡಿಫ್ರೆಶನ್ ಗೆ ಹೋದರೆ ನನಗೆ ಮನೋವೈದ್ಯರ ಅಗತ್ಯವಿಲ್ಲ. ಶಾರುಖ್ ಹಾಡುಗಳೇ ನನ್ನನ್ನು ಸರಿ ಪಡಿಸುತ್ತವೆ ಅಂತಾ ಆಲಿಯಾ ಹೇಳಿದ್ದಾರೆ. ಒಂದು ಕಾಲದಲ್ಲಿ ತನ್ನ ಕನಸಿನ ನಟನಾಗಿದ್ದ ಶಾರುಖ್ ಜೊತೆ ಅಭಿನಯಿಸೋ ಅವಕಾಶ ಸಿಕ್ಕಿದೆ. ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗುತ್ತಿದ್ದಾರೆ. ಇದೇ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು ಅದಕ್ಕಾಗಿ ಆಲಿಯಾ ಕಾತುರದಿಂದ ಕಾಯುತ್ತಿದ್ದಾರಂತೆ.