ಸ್ಟಾರ್ ವ್ಯವಸ್ಥೆ ಮುಖ್ಯ, ಹಾಗೆಯೇ ಒಳ್ಳೆಯ ಪ್ರದರ್ಶನವೂ: ಶಾರುಕ್ ಖಾನ್ ಸ್ಟಾರ್ ವ್ಯವಸ್ಥೆ ಮೇಲೆ ಹಿಂದಿ ಸಿನೆಮಾ ನಡೆಯುತ್ತಿದೆ ಆದರೆ ಪ್ರೇಕ್ಷಕರು ಒಳ್ಳೆಯ ಪ್ರದರ್ಶನ ನೀಡುವ ಸ್ಟಾರ್ ಗಳನ್ನು ಆಯ್ಕೆ ಮಾಡುತ್ತಾರೆ ಎಂದಿದ್ದಾರೆ ಸೂಪರ್ ಸ್ಟಾರ್ ಮುಂಬೈ: ಸ್ಟಾರ್ ವ್ಯವಸ್ಥೆ ಮೇಲೆ ಹಿಂದಿ ಸಿನೆಮಾ ನಡೆಯುತ್ತಿದೆ ಆದರೆ ಪ್ರೇಕ್ಷಕರು ಒಳ್ಳೆಯ ಪ್ರದರ್ಶನ ನೀಡುವ ಸ್ಟಾರ್ ಗಳನ್ನು ಆಯ್ಕೆ ಮಾಡುತ್ತಾರೆ ಎಂದಿದ್ದಾರೆ ಸೂಪರ್ ಸ್ಟಾರ್ ಶಾರುಕ್ ಖಾನ್. ಬಾಲಿವುಡ್ ನಲ್ಲಿ ಈ ಸ್ಟಾರ್ ವ್ಯವಸ್ಥೆ ಎಷ್ಟು ಮುಖ್ಯ ಎಂಬ ಪ್ರಶ್ನೆಗೆ "ಐಪಿಎಲ್ ನಲ್ಲಿ ಸ್ಟಾರ್ ಗಳಿಲ್ಲದೆಹೋದರೆ ಅದನ್ನು ಯಾರೂ ನೋಡುವುದಿಲ್ಲ. ಆದುದರಿಂದ ಸಿನೆಮಾಗಳನ್ನು ಜನ ಆಯ್ಕೆ ಮಾಡಲು ಸ್ಟಾರ್ ಗಳು ಬೇಕು. "ಧೋನಿ ಕ್ರಿಕೆಟ್ ಸ್ಟಾರ್. ಅವರು ಮೂರು ಸಾರ್ತಿ ಸರಿಯಾಗಿ ಆಡದಿದ್ದರೆ ಜನ ಅವರನ್ನು ಜರಿಯಲು ಪ್ರಾರಂಭಿಸುತ್ತಾರೆ. ಆದುದರಿಂದ ಒಳ್ಳೆಯ ಪ್ರದರ್ಶನ ಮುಖ್ಯ. ಆದುದರಿಂದ ಸ್ಟಾರ್ ವ್ಯವಸ್ಥೆ ಮುಖ್ಯ, ಇಲ್ಲವಾದಲ್ಲಿ ನಮ್ಮ ಸಿನೆಮಾಗಳು ಕೊನೆಗಾಣುತ್ತಿದ್ದವು" ಎನ್ನುತ್ತಾರೆ ೫೦ ವರ್ಷದ ದಿಲ್ವಾಲೇ ನಟ ಶಾರುಕ್. ಈ ವಯಸ್ಸಿನಲ್ಲೂ ರೊಮ್ಯಾಂಟಿಕ್ ಹೀರೋ ಪಾತ್ರ ಮಾಡಲು ಅವಕಾಶ ಸಿಗುತ್ತಿರುವುದಕ್ಕೆ ತಾವು ಅದೃಷ್ಟವಂತ ಎಂದು ಹೇಳಿಕೊಳ್ಳುವ ಶಾರುಕ್ "ಈ ಹಿಂದೆ ೪೦ ದಾಟಿದ ಮೇಲೆ ಹಿರೋ, ಹಿರೋ ಆಗಿ ಉಳಿಯುತ್ತಿರಲಿಲ್ಲ. ಆದುದರಿಂದ ದೇವರು ನಮಗೆ ೫೦ರಲ್ಲೂ ಕೂಡ ೨೫ ರಲ್ಲಿ ಮಾಡುತ್ತಿದ್ದ ಪಾತ್ರಗಳನ್ನೇ ಕರುಣಿಸಿದ್ದಾನೆ ಎಂದು ನಾನು ಮತ್ತು ಸಲ್ಮಾನ್ ಒಂದು ದಿನ ಮಾತಾಡಿಕೊಂಡಿದ್ದೆವು. "ಇದು ನಮಗೆ ಅತಿ ಮಹತ್ವದ್ದು" ಎನುತ್ತಾರೆ ಕಾಜೋಲ್ ಜೊತೆ ದಿಲ್ವಾಲೇ ಸಿನೆಮಾದಲ್ಲಿ ನಟಿಸುವ ಶಾರುಕ್ . ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನೆಮಾ ಡಿಸೆಂಬರ್ ೧೮ ರಂದು ಬಿಡುಗಡೆಯಾಗಲಿದ್ದು, ವರುಣ್ ಧವನ್, ಕೀರ್ತಿ ಸ್ಯಾನನ್, ಬೊಮ್ಮನ್ ಇರಾನಿ ಮತ್ತು ಜಾನಿ ಲೆವರ್ ಕೂಡ ತಾರಾಗಣದಲ್ಲಿದ್ದಾರೆ.